ಬಡ ರೋಗಿಗಳಿಗಿನ್ನು ಹೃದ್ರೋಗ ಚಿಕಿತ್ಸೆ ಸಂಪೂರ್ಣ ಉಚಿತ. ವೆನ್ಲಾಕ್‌ ಆಸ್ಪತ್ರೆಯಲ್ಲಿ ಸುಸಜ್ಜಿತ ಕ್ಯಾಥ್‌ಲ್ಯಾಬ್ ಕಾರ್ಯಾರಂಭಕ್ಕೆ ಸಿದ್ದ

Written by shanmedianews

July 26, 2025

ಮಂಗಳೂರು:ದೇಶದಲ್ಲೆಡೆ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಚರ್ಚೆಯ ವಿಷಯವಾಗಿರುವಂತೆ, ಹೃದ್ರೋಗಕ್ಕೆ ಸಂಬಂಧಿಸಿದ ಚಿಕಿತ್ಸೆಗಳು ದುಬಾರಿ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿದೆ. ಈ ನಡುವೆ, ದ.ಕ. ಜಿಲ್ಲಾಸ್ಪತ್ರೆ ವೆನ್ನಾಕ್ ನಲ್ಲಿ ಹೃದಯ ಸಂಬಂಧಿ ರೋಗಗಳಿಗೆ ಚಿಕಿತ್ಸೆಗೆ ಪೂರಕವಾದ ಕ್ಯಾಥ್ (ಕಾರ್ಡಿಯಾಕ್ ಕ್ಯಾತಿಟರೈಸೇಶನ್) ಲ್ಯಾಬ್ ಸಿದ್ದಗೊಂಡಿದೆ.

ಶೀಘ್ರದಲ್ಲೇ ಕ್ಯಾಥ್‌ಲ್ಯಾಬ್ ಕಾರ್ಯಾರಂಭಕ್ಕೆ ಸಿದ್ಧತೆ ನಡೆಸಲಾಗಿದ್ದು, ಆಂಜಿಯೋಪ್ಲಾಸ್ಪಿ ಹಾಗೂ ಆ್ಯಂಜಿಯೋಗ್ರಾಮ್ ಮೊದಲಾದ ದುಬಾರಿ ವೆಚ್ಚದ ಹೃದಯ ಶಸ್ತ್ರಚಿಕಿತ್ಸೆಗಳು ಇಲ್ಲಿ ಬಡ ರೋಗಿಗಳಿಗೆ ಉಚಿತವಾಗಿ ಲಭಿಸಲಿದೆ. ರಾಜ್ಯದ ಆರೋಗ್ಯ ಸಚಿವರೂ ಆಗಿರುವ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಮುತುವರ್ಜಿಯಲ್ಲಿ ವೆನ್ಲಾಕ್’ನಲ್ಲಿ ಕ್ಯಾಥ್ ಲ್ಯಾಬ್ ಆರಂಭಕ್ಕೆ ಪ್ರಕ್ರಿಯೆಗಳು ನಡೆದಿವೆ.

ಕೆಎಂಸಿ ಆಸ್ಪತ್ರೆಯ ನೆರವಿನಲ್ಲಿ ಕಾರ್ಯಾಚರಿಸುತ್ತಿರುವ ವೆನ್ನಾಕ್‌ನ ಹೊಸ ತುರ್ತು ಚಿಕಿತ್ಸಾ ವಿಭಾಗದ ಘಟಕದ ನೆಲ ಮಹಡಿಯಲ್ಲಿ ನೂತನ ಕ್ಯಾಥ್ಲ್ಯಾಬ್ ಸಿದ್ದಪಡಿಸಲಾಗಿದೆ. ಕೆಎಂಸಿ ಆಸ್ಪತ್ರೆಯಿಂದ ತಜ್ಞ ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿ ನೇಮಕ ಈಗಾಗಲೇ ನಡೆದಿದ್ದು, ಅಗತ್ಯ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿದೆ. ಆಂಜಿಯೋಪ್ಲಾಸ್ಟಿ ಹಾಗೂ ಆ್ಯಂಜಿಯೋಗ್ರಾಮ್ ಮೊದಲಾದ ಹೃದಯ ಸಂಬಂಧಿ ಚಿಕಿತ್ಸೆಗಳ ಅಗತ್ಯವಾದ ಸಲಕರಣೆಗಳು, ಔಷಧವನ್ನು ವೆನ್ಹಾಕ್ ಆಸ್ಪತ್ರೆಯಿಂದ ಒದಗಿಸಲಾಗುತ್ತದೆ. ಈ ಮೂಲಕ ಇಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಉಚಿತ ಚಿಕಿತ್ಸೆ ಲಭ್ಯವಾಗಲಿದ್ದು ಎಪಿಎಲ್ ಕಾರ್ಡುದಾರರಿಗೂ ಆಯುಷ್ಮಾನ್’ನಡಿ ಚಿಕಿತ್ಸೆ ಸೇರಿದಂತೆ ಅಗತ್ಯವಾದ ಕೆಲವೊಂದು ಪ್ರಕ್ರಿಯೆಗಳು ಸದ್ಯ ಚಾಲ್ತಿಯಲ್ಲಿದೆ. ಸುಮಾರು 5 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಈ ಕ್ಯಾಥ್ ಲಾಬ್ ಸಿದ್ದಗೊಂಡಿದೆ.

1848 ರಿಂದ ಅಸ್ತಿತ್ವದಲ್ಲಿರುವ ಮಂಗಳೂರಿನ ಬಡರೋಗಿಗಳ ಆಶಾಕಿರಣವಾಗಿರುವ ವೆನ್ನಾಕ್ ಆಸ್ಪತ್ರೆಯಲ್ಲಿ ಬಹುತೇಕ ಎಲ್ಲಾ ಚಿಕಿತ್ಸೆಗಳು ಲಭ್ಯವಿವೆ. ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ, ಹೊರ ರಾಜ್ಯಗಳ ರೋಗಿಗಳು ಚಿಕಿತ್ಸೆಗಾಗಿ ವೆನ್ನಾಕ್ ಆಸ್ಪತ್ರೆಗೆ ಬರುತ್ತಾರೆ.

ಹೃದ್ರೋಗಕ್ಕೆ ಸಂಬಂಧಿಸಿದ ಚಿಕಿತ್ಸೆಗಳು ಇಲ್ಲಿ ದೊರೆಯುತ್ತವೆಯಾದರೂ, ಹೃದಾಯಾಘಾತ ವೇಳೆ ಆಂಜಿಯೋಪ್ಲಾಸ್ಟಿ ಹಾಗೂ ಆ್ಯಂಜಿಯೋಗ್ರಾಮ್ ಮೊದಲಾದ ಶಸ್ತ್ರ ಚಿಕಿತ್ಸೆಗಳಿಗಾಗಿ ಇತರ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ.

ಹೃದಯ ರೋಗ ತಜ್ಞರು, ನಾಲ್ಕು ಮಂದಿ ಟೆಕ್ನಿಶೀಯನ್ ಗಳು, 12 ಮಂದಿ ಸ್ಟಾಫ್ ನರ್ಸ್’ಗಳನ್ನು ಒದಗಿಸಲಾಗಿದೆ. ಉಳಿದಂತೆ ಔಷಧಿ ಹಾಗೂ ಶಸ್ತ್ರ ಚಿಕಿತ್ಸೆಯ ಸಂಬಂಧ ರೋಗಿಗೆ ಅಗತ್ಯವಾದ ವೈದ್ಯಕೀಯ ಸಲಕರಣೆಗಳನ್ನು ಆಸ್ಪತ್ರೆ ಕಡೆಯಿಂದ ಒದಗಿಸಲಾಗುತ್ತದೆ. ಬಿಪಿಎಲ್ ಕಾರ್ಡ್‌ವರಿಗೆ ಉಚಿತ ಚಿಕಿತ್ಸೆ ಇಲ್ಲಿ ಲಭ್ಯವಾಗಲಿದ್ದು, ಆ.1ರಂದು ರಾಜ್ಯ ಆರೋಗ್ಯ ಸಚಿವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಕ್ಯಾಥ್ ಲ್ಯಾಬ್‌ನ ಕಾರ್ಯಾರಂಭ ಹಾಗೂ ಇತರ ವಿಷಯಗಳ ಬಗ್ಗೆ ಅಂತಿಮ ತೀರ್ಮಾನವಾಗಲಿದೆ.

*-ಡಾ.ಶಿವಪ್ರಕಾಶ್‌,* [ಅಧೀಕ್ಷಕರು, ವೆನ್ಲಾಕ್ ಆಸ್ಪತ್ರೆ]
j

Shan Media News is a trusted digital news platform bringing you the latest updates from Karnataka and beyond. For feedback or story tips, contact us at [contact@shanmedianews.site].

Latest News

News

ಬೈಕಂಪಾಡಿ, ಕೈಗಾರಿಕಾ ಮೀನು ಸಂಸ್ಕರಣಾ ಘಟಕದಲ್ಲಿ ಅನಿಲ‌ ಸೋರಿಕೆ, ನಾಲ್ವರು ಕಾರ್ಮಿಕರು ಗಂಭೀರ : ಸಮಗ್ರ ತನಿಖೆಗೆ ಎಸ್.ಡಿ.ಟಿ.ಯು ಆಗ್ರಹ.

ಮಂಗಳೂರು: ಬೈಕಂಪಾಡಿ ಕೈಗಾರಿಕಾ ಪ್ರದೇಶದ ಮೀನು ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಅನಿಲ ಸೋರಿಕೆಯಾಗಿ ಉತ್ತರ ಭಾರತ ಮೂಲದ ನಾಲ್ವರು ಕಾರ್ಮಿಕರು ತೀವ್ರವಾಗಿ ಅಸ್ವಸ್ಥತಗೊಂಡು ಆಸ್ಪತ್ರೆಗೆ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಘಾತಕಾರಿ
News

ಧರ್ಮಸ್ಥಳ ಕೇಸ್;‌ ಪಾಯಿಂಟ್‌ ನಂ.1ರಲ್ಲಿ ಸಿಕ್ಕ ಡೆಬಿಟ್‌, ಪಾನ್‌ ಕಾರ್ಡ್‌ ರಹಸ್ಯ ಬಯಲು – ವಾರಸುದಾರ ಮಹಿಳೆ ಇನ್ನೂ ಜೀವಂತ

ಮಂಗಳೂರು: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಆರೋಪ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪಾಯಿಂಟ್‌ ನಂಬರ್‌ ಒಂದರಲ್ಲಿ ಸಿಕ್ಕ ಡೆಬಿಟ್‌ ಕಾರ್ಡ್‌, ಪಾನ್‌ ಕಾರ್ಡ್‌ ರಹಸ್ಯ ಬಯಲಾಗಿದೆ. ಡೆಬಿಟ್ ಕಾರ್ಡ್ ವಾರಿಸುದಾರ ಮಹಿಳೆ ಇನ್ನೂ ಜೀವಂತವಾಗಿದ್ದಾರೆ. ಪಾಯಿಂಟ್