ಪುತ್ತೂರು : ಮಿಸ್ಬಾಹುಲ್ ಹುದಾ ಮದ್ರಸ ಕೊರಿಂಗಿಲ ಇಲ್ಲಿ ಸಮಸ್ತ ಸ್ಥಾಪಕ ದಿನವನ್ನು ಆಚರಿಸಲಾಯಿತು. ಖತೀಬರಾದ ಬಹು. ಅಲ್ಹಾಜ್ GH ಅಯೂಬ್ ವಹಬಿ ಉಸ್ತಾದರು ಪ್ರಾರ್ಥನೆ ನೆರವೇರಿಸಿ ಸಮಸ್ತದ ಕುರಿತಾಗಿ ಅದರ ಚರಿತ್ರೆ,ಮಹತ್ವವನ್ನು ವಿವರಿಸಿದರು. ಜಮಾತ್ ಅಧ್ಯಕ್ಷರಾದ ಜ. ಮಹಮ್ಮದ್ ಕು oಞ ಹಾಜಿ ಯವರ ನೇತೃತ್ವದಲ್ಲಿ ಸಮಸ್ತದ ಧ್ವಜಾರೋಹಣ ನಡೆಯಿತು.
ಸಮಸ್ತ ಸ್ಥಾಪಕ ದಿನಾಚರಣೆಯ ಅಂಗವಾಗಿ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಹ ಅಧ್ಯಾಪಕರಾದ ಬಹು. ಅಬೂಬಕ್ಕರ್ ಮದನಿ, ಕಾರ್ಯದರ್ಶಿ ಮೂಸೆ ಕುoಞ. ಬಿ. ಅಶ್ರಫ್ ಪಾರ, ಆಶ್ರಫ್ ಕೆ, ಜುನೈದ್ ಜಿ ,ಆಲಿ ಕುoಞ ಕೋಟ್ರಸ್,sksbv ಪದಾಧಿಕಾರಿಗಳು, ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

