Header Banner

ಪಾಸ್‌ಪೋರ್ಟ್ ನಾಗರಿಕತ್ವದ ದಾಖಲೆ ಅಲ್ಲ; ಅದು ಕೇವಲ ಪ್ರಯಾಣದ ದಾಖಲೆ: ಕೇಂದ್ರ ಸರ್ಕಾರ ಸ್ಪಷ್ಟನೆ

Banner

ನವದೆಹಲಿ, ಜೂನ್ 24: ಪಾಸ್‌ಪೋರ್ಟ್ ಅನ್ನು ನಾಗರಿಕತ್ವದ ದಾಖಲೆ ಎಂದು ಪರಿಗಣಿಸಬಾರದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸ್ಪಷ್ಟಪಡಿಸಿದೆ. ಪಾಸ್‌ಪೋರ್ಟ್ ಮುಖ್ಯವಾಗಿ ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ ನೀಡಲಾಗುವ ದಾಖಲೆಯಾಗಿದ್ದು, ನಾಗರಿಕತ್ವವನ್ನು ನಿರ್ಧರಿಸುವ ಅಂತಿಮ ಕಾನೂನು ದಾಖಲೆ ಅಲ್ಲ ಎಂದು ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.  

Advertisement

14ನೇ ಪಾಸ್‌ಪೋರ್ಟ್ ಸೇವಾ ದಿವಸದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಧಿಕಾರಿಗಳು, ಪಾಸ್‌ಪೋರ್ಟ್ ನೀಡುವ ಮುನ್ನ ವಿವಿಧ ಸರ್ಕಾರಿ ದಾಖಲೆಗಳ ಆಧಾರದ ಮೇಲೆ ಸಮಗ್ರ ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದರು. ಆದರೆ ಭಾರತೀಯ ನಾಗರಿಕತ್ವದ ಪ್ರಶ್ನೆಗಳು ಸಂವಿಧಾನ ಮತ್ತು ನಾಗರಿಕತ್ವ ಕಾಯ್ದೆಯಡಿ ನಿರ್ಧಾರವಾಗುತ್ತವೆ ಎಂದು ಅವರು ಸ್ಪಷ್ಟಪಡಿಸಿದರು.  

ಈ ಹೇಳಿಕೆ ಪಾಸ್‌ಪೋರ್ಟ್ ಮತ್ತು ನಾಗರಿಕತ್ವದ ನಡುವಿನ ವ್ಯತ್ಯಾಸವನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸುವ ಉದ್ದೇಶದಿಂದ ನೀಡಲಾಗಿದೆ ಎಂದು ತಿಳಿದುಬಂದಿದೆ.

In-Article Banner
spot_img

Latest article