ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಇಂದು ಮಧ್ಯಪ್ರಾಚ್ಯ ಯುದ್ಧ ಪ್ರಾರಂಭವಾದ ಒಂದು ತಿಂಗಳ ನಂತರ ಇಸ್ರೇಲ್ ಮೇಲೆ ತಮ್ಮ ಮೊದಲ ದಾಳಿಯನ್ನು ಪ್ರಾರಂಭಿಸಿರುವುದಾಗಿ ಹೇಳಿಕೊಂಡಿದ್ದಾರೆ. ಯೆಮೆನ್‌ ದಾಳಿಯನ್ನು ಇಸ್ರೇಲ್ ಮಿಲಿಟರಿ ತಡೆಹಿಡಿಯುತ್ತಿದೆ ಎಂದು ಹೇಳಿದೆ. ತಮ್ಮ ಮಿತ್ರ ಇರಾನ್ ಮೇಲಿನ ದಾಳಿ ಮುಂದುವರಿದರೆ ಅಥವಾ ಹೆಚ್ಚಿನ ದೇಶಗಳು ಸಂಘರ್ಷಕ್ಕಿಳಿದರೇ ತಾವು ಪಶ್ಚಿಮ-ಏಷ್ಯಾ ಯುದ್ಧಕ್ಕೆ ಧುಮುಕುವುದಾಗಿ ಹೌತಿ ಪಡೆ ಈ ಹಿಂದೆ ಎಚ್ಚರಿಸಿತ್ತು.

ಹೌತಿ ಪಡೆ ಇಸ್ರೇಲಿ ಮಿಲಿಟರಿ ನೆಲೆಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ಹೌತಿ ವಕ್ತಾರ ಯಾಹ್ಯಾ ಸಾರಿ X ವೀಡಿಯೊ ಬಿಡುಗಡೆ ಮಾಡಿದ್ದಾರೆ. ಈ ಗುಂಪು ಉತ್ತರ ಯೆಮೆನ್‌ನ ಹೆಚ್ಚಿನ ಭಾಗವನ್ನು ನಿಯಂತ್ರಿಸುತ್ತದೆ. ಗಾಜಾ ಯುದ್ಧದ ಸಮಯದಲ್ಲಿ, ಅವರು ಡ್ರೋನ್‌ಗಳು ಮತ್ತು ಕ್ಷಿಪಣಿಗಳೊಂದಿಗೆ ಇಸ್ರೇಲ್ ಮೇಲೆ ಪದೇ ಪದೇ ದಾಳಿ ಮಾಡಿದ್ದರು.

ಯೆಮೆನ್‌ನಿಂದ ಇಸ್ರೇಲ್ ಕಡೆಗೆ ಕ್ಷಿಪಣಿಯನ್ನು ಹಾರಿಸಲಾಗಿದ್ದು ನಮ್ಮ ವಾಯುರಕ್ಷಣಾ ಪಡೆಗಳು ಅದನ್ನು ತಡೆಯುವ ಕೆಲಸ ಮಾಡುತ್ತಿವೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಇಸ್ರೇಲ್‌ನಲ್ಲಿ ಯಾವುದೇ ಸಾವುನೋವುಗಳು ಅಥವಾ ಹಾನಿಯ ವರದಿಗಳಿಲ್ಲ. ಕ್ಷಿಪಣಿಯನ್ನು ತಡೆಹಿಡಿಯಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಹೌತಿಗಳು ನೇರ ಮಿಲಿಟರಿ ಹಸ್ತಕ್ಷೇಪಕ್ಕೆ ಸಂಪೂರ್ಣವಾಗಿ ಸಿದ್ಧರಿದ್ದೇವೆ ಎಂದು ಹೇಳಿದರು. ಯಾವುದೇ ಇತರ ದೇಶವು ಯುಎಸ್-ಇಸ್ರೇಲ್ ಸಂಘರ್ಷಕ್ಕೆ ಸೇರಿದರೆ ಅಥವಾ ಪ್ರತಿಕೂಲ ಕಾರ್ಯಾಚರಣೆಗಳಿಗೆ ಕೆಂಪು ಸಮುದ್ರವನ್ನು ಬಳಸಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಯುಎಸ್, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಈ ಸಮಯದಲ್ಲಿ ಕೆಂಪು ಸಮುದ್ರವು ಅತ್ಯಂತ ಮಹತ್ವದ್ದಾಗಿದೆ. ಸೌದಿ ಅರೇಬಿಯಾ ತನ್ನ ತೈಲ ರಫ್ತಿನ ಹೆಚ್ಚಿನ ಭಾಗವನ್ನು ಯಾನ್ಬು ಬಂದರಿಗೆ ತಿರುಗಿಸಿದೆ. ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಮೂಲಕ ಗಲ್ಫ್ ದೇಶಗಳಿಗೆ ದಿಗ್ಭಂದನ ಹಾಕಿದೆ. ಇದೀಗ ಯೆಮೆನ್ ತನ್ನ ಹಿಡಿತದಲ್ಲಿರುವ ಬಾಬ್ ಎಲ್-ಮಂಡೇಬ್ ‘ಬಂದ್’ ಮಾಡಿದರೇ ಇದು ಜಗತ್ತಿಗೆ ಮತ್ತಷ್ಟು ಸಂಕಷ್ಟ ಸೃಷ್ಟಿಯಾಗಲಿದೆ.

Leave a Reply

Your email address will not be published. Required fields are marked *

error: Content is protected !!
Don`t copy text! This Content is Protected