ಒಪ್ಪಂದಕ್ಕೆ ಒಪ್ಕೋತೀರೋ ಇಲ್ವೋ.. Kharg ದ್ವೀಪ ಸ್ಫೋಟಿಸ್ತೀವಿ..: ಇರಾನ್ ಗೆ Donald Trump ಅಂತಿಮ ಗಡುವು

ವಾಷಿಂಗ್ಟನ್: ಪೂರ್ವ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ತಿಂಗಳಾದರೂ ಕಡಿಮೆಯಾಗುವ ಯಾವುದೇ ಮುನ್ಸೂಚನೆ ದೊರೆಯುತ್ತಿಲ್ಲ.. ಇದರ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಗೆ ಒಪ್ಪಂದಕ್ಕೆ ಬರಲು ಅಂತಿಮ ಎಚ್ಚರಿಕೆ ನೀಡಿದ್ದಾರೆ. ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವೆ ಶೀಘ್ರದಲ್ಲೇ ಒಪ್ಪಂದ ಮಾಡಿಕೊಳ್ಳದಿದ್ದರೆ ಇರಾನ್‌ನ ವಿದ್ಯುತ್ ಉತ್ಪಾದನಾ ಸ್ಥಾವರಗಳು ಮತ್ತು ಖಾರ್ಗ್ ದ್ವೀಪವನ್ನು “ಸ್ಫೋಟಿಸಿ ಸಂಪೂರ್ಣವಾಗಿ ನಾಶಮಾಡುವುದಾಗಿ” ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಬೆದರಿಕೆ ಹಾಕಿದ್ದಾರೆ. ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್ ಮೂಲಕ ಇರಾನ್ […]
ಟೆಹರಾನ್ ನ ಮಿಲಿಟರಿ ಮೂಲಸೌಕರ್ಯಗಳ ಮೇಲೆ ಭಾರಿ ಪ್ರಮಾಣದ ದಾಳಿ, ಇರಾನ್ ಪ್ರತೀಕಾರದ ವಾರ್ನಿಂಗ್!

ಟೆಹರಾನ್: ಇರಾನ್ ನ ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಭಾನುವಾರ ಭಾರಿ ಪ್ರಮಾಣದಲ್ಲಿ ದಾಳಿ ನಡೆಸಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ (IDF) ಹೇಳಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ IDF, ಡಜನ್ ಗಟ್ಟಲೇ ಯುದ್ಧ ಸಲಕರಣೆಗಳ ಸಂಗ್ರಹಗಾರ, ತಯಾರಿಕಾ ಕೇಂದ್ರ ಸೇರಿದಂತೆ ಇರಾನಿನ ಭಯೋತ್ಪಾದಕತೆಗೆ ಸಂಬಂಧಿಸಿದ ಹಲವು ಕಡೆಗಳಲ್ಲಿ ದಾಳಿ ನಡೆಸಿರುವುದಾಗಿ ಮಾಹಿತಿ ನೀಡಿದೆ. ದಾಳಿ ವೇಳೆ ಕಮಾಂಡರ್ ಕಾರ್ಯನಿರ್ವಹಿಸುತ್ತಿದ್ದ ಸ್ಥಳಗಳು ಸೇರಿದಂತೆ ಹಲವಾರು ತಾತ್ಕಾಲಿಕ ಕಮಾಂಡ್ ಸೆಂಟರ್‌ಗಳನ್ನು ನಾಶಪಡಿಸಲಾಗಿದೆ. ಬ್ಯಾಲಿಸ್ಟಿಕ್ ಕ್ಷಿಪಣಿ ಉತ್ಪಾದನೆ […]
ಮೈಸೂರು: ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ವ್ಯಕ್ತಿಯನ್ನು ಬಂಧಿಸಿದ ದೆಹಲಿ ಪೊಲೀಸರು!

ಮೈಸೂರು: ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ನ್ಯಾಯಾಲಯಗಳಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶಗಳನ್ನು ಕಳುಹಿಸಿ ಭೀತಿ ಮೂಡಿಸಿದ ಆರೋಪ ಹೊತ್ತಿರುವ ವ್ಯಕ್ತಿಯನ್ನು ದೆಹಲಿ ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಭಾನುವಾರ ತಿಳಿಸಿವೆ. ಆರೋಪಿ ಶ್ರೀನಿವಾಸ್ ನಗರದ ಆರನೇ ಕ್ರಾಸ್‌ನ ಎರಡನೇ ಹಂತದ ಬೃಂದಾವನ ಲೇಔಟ್‌ನಲ್ಲಿರುವ ಮನೆಯಿಂದ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ. ಆತ ಅಲ್ಪಾವಧಿಯಲ್ಲಿಯೇ ಹಲವಾರು ಬೆದರಿಕೆ ಇಮೇಲ್‌ಗಳನ್ನು ಕಳುಹಿಸುತ್ತಿದ್ದನು. ಸ್ಫೋಟಗಳ ಬಗ್ಗೆ ಎಚ್ಚರಿಕೆ ನೀಡಿ ವ್ಯಾಪಕ ಆತಂಕ ಮೂಡಿಸುತ್ತಿದ್ದನು ಎಂದು ಮೂಲಗಳು ತಿಳಿಸಿವೆ. ಪೊಲೀಸ್ ಮೂಲಗಳ ಪ್ರಕಾರ, […]
ಪರಪ್ಪನ ಅಗ್ರಹಾರ ಜೈಲಲ್ಲಿ ಮುಂದುವರೆದ ಐಷಾರಾಮಿ ಸೌಲಭ್ಯ: ಹಿರಿಯ ಅಧಿಕಾರಿ ವಿರುದ್ಧವೇ ಕೈದಿಗಳ ಗಂಭೀರ ಆರೋಪ, Video ವೈರಲ್

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮತ್ತೊಮ್ಮೆ ಸುದ್ದಿಯಲ್ಲಿದೆ. ಜೈಲಿನ ಒಳಗಡೆ ಮೊಬೈಲ್, ಟಿವಿ ಹಾಗೂ ನೆಟ್‌ಫ್ಲಿಕ್ಸ್‌ನಂತಹ ಐಷಾರಾಮಿ ಸೌಲಭ್ಯಗಳಿವೆ ಎಂದು ಬಿಂಬಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಜೈಲಿನಲ್ಲಿರುವ ಕೆಲ ವಿಚಾರಣಾಧೀನ ಕೈದಿಗಳು ವಿಡಿಯೋ ಚಿತ್ರೀಕರಿಸುತ್ತಿರುವುದು ಕಂಡು ಬಂದಿದ್ದು, “ನಾಳೆ ಐಪಿಎಲ್ ಪಂದ್ಯವಿದೆ, ಈ ಸಲ ಕಪ್ ನಮ್ದೇ” ಎಂದು ಹೇಳುವುದರ ಜೊತೆಗೆ, ಜೈಲಿನೊಳಗೆ ಮೊಬೈಲ್, ಟಿವಿ ಹಾಗೂ ನೆಟ್‌ಫ್ಲಿಕ್ಸ್ ಸೌಲಭ್ಯಗಳಿವೆ ಎಂದು […]
ನಾನು ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತೇನೆ, ನನ್ನ ಲಕ್ಷುರಿ ಜೀವನ ಬಿಟ್ಟು, ನೋವುಗಳನ್ನು ಸಹಿಸಿಕೊಂಡು ನಿಮ್ಮ ಋಣ ತೀರಿಸಲು ಬಂದಿದ್ದೇನೆ, ಒಂದು ಬಾರಿ ಅವಕಾಶ ನೀಡಿ’: ಟಿವಿಕೆ ವಿಜಯ್ -Video

ಚೆನ್ನೈ: ಏಪ್ರಿಲ್ 23ರಂದು ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಾವು ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದಾಗಿ ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಇಂದು ಭಾನುವಾರ ಘೋಷಿಸಿದ್ದಾರೆ. ಚೆನ್ನೈನ ಪೆರಂಬೂರು ಮತ್ತು ತಿರುಚಿರಾಪಳ್ಳಿ ಈಸ್ಟ್ ಕ್ಷೇತ್ರಗಳಿಂದ “ಸಿ ಜೋಸೆಫ್ ವಿಜಯ್” ಎಂಬ ಹೆಸರಿನಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದರು. ಮೂಲತಃ ನಟರಾಗಿ ದೇಶಾದ್ಯಂತ ಜನಪ್ರಿಯರಾಗಿರುವ ಇಂದು ರಾಜಕಾರಣಿಯಾಗಿರುವ ದಳಪತಿ ವಿಜಯ್ ಅವರು ಪಕ್ಷದ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನೂ ಪ್ರಕಟಿಸಿದರು. ಸಾಮಾನ್ಯ ಕಾರ್ಯದರ್ಶಿ ಎನ್ ಆನಂದ್ ಟಿ ನಗರದಿಂದ, ಖಜಾಂಚಿ ವೆಂಕಟರಾಮನ್ ಮೈಲಾಪುರದಿಂದ, ಚುನಾವಣಾ ಪ್ರಚಾರ […]
West Asia Conflict- ವದಂತಿಗಳಿಗೆ ಕಿವಿಗೊಡಬೇಡಿ, ಎಚ್ಚರಿಕೆ ಇರಲಿ, ಸವಾಲನ್ನು ಒಟ್ಟಾಗಿ ಎದುರಿಸೋಣ: ಪ್ರಧಾನಿ ಮೋದಿ-Video

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ತೀವ್ರ ಯುದ್ಧದಿಂದ ಉಂಟಾಗುತ್ತಿರುವ ಸವಾಲುಗಳನ್ನು ಎದುರಿಸಲು ದೇಶದ ಎಲ್ಲ ನಾಗರಿಕರು ಒಗ್ಗೂಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಎಲ್ಲರೂ ಎಚ್ಚರಿಕೆಯಿಂದಿದ್ದು ವದಂತಿಗಳಿಗೆ ಒಳಗಾಗಬಾರದು ಎಂದೂ ಹೇಳಿದ್ದಾರೆ. ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ ಕಿ ಬಾತ್’ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಿರುವ 1 ಕೋಟಿಗೂ ಹೆಚ್ಚು ಭಾರತೀಯರಿಗೆ ಸಾಧ್ಯವಾದ ಎಲ್ಲಾ ಸಹಾಯವನ್ನು ಒದಗಿಸಿರುವುದಕ್ಕೆ ಆ ದೇಶಗಳಿಗೆ ತಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. […]
ಟ್ರಂಪ್ ಎಚ್ಚರಿಕೆಗೆ ಬಗ್ಗದ ಇರಾನ್: ಸೌದಿ ವಾಯುನೆಲೆ ಮೇಲೆ ಮುಂದುವರೆದ ಕ್ಷಿಪಣಿ ದಾಳಿ; ಅಮೆರಿಕಾದ 15 ಸೈನಿಕರಿಗೆ ಗಾಯ, ಐವರ ಸ್ಥಿತಿ ಗಂಭೀರ

ವಾಷಿಂಗ್ಟನ್: ಮಧ್ಯ ಪ್ರಾಚ್ಯ ಸಂಘರ್ಷ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಲೇ ಇದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎಚ್ಚರಿಕೆ ಹಾಗೂ ಬೆದರಿಕೆಗಳಿಗೆ ಬಗ್ಗದ ಇರಾನ್ ಮತ್ತೆ ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆ ಮೇಲೆ ಶುಕ್ರವಾರ ಭಯಾನಕ ದಾಳಿ ನಡೆಸಿದೆ. 6 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 29 ಡ್ರೋನ್‌ಗಳನ್ನು ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆ ಮೇಲೆ ಉಡಾಯಿಸಿದ್ದು, ಪರಿಣಾಮ ಕನಿಷ್ಠ 15 ಮಂದಿ ಅಮೆರಿಕಾದ ಸೈನಿಕರು ಗಾಯಗೊಂಡಿದ್ದಾರೆ. ಅವರಲ್ಲಿ 5 ಜನರಿಗೆ ಗಂಭೀರ […]
ಕೊನೆಗೂ ಇರಾನ್ ನೆಲದಲ್ಲಿ ಸೇನೆ ಇಳಿಸ್ತಾ ಅಮೆರಿಕ?: 20 ವರ್ಷಗಳಲ್ಲಿ ಅತಿದೊಡ್ಡ ಸೇನಾ ಜಮಾವಣೆ, Hormuz ವಶಕ್ಕೆ ಇನ್ನಿಲ್ಲದ ಕಸರತ್ತು!

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್ ಅಮೆರಿಕ ಯುದ್ಧವು ಐದನೇ ವಾರಕ್ಕೆ ವಿಸ್ತರಿಸಿದ್ದು, ಈ ನಡುವೆ ಹಾರ್ಮುಜ್ ಜಲಸಂಧಿ ವಶಕ್ಕೆ ಪಡೆಯಲು ಅಮೆರಿಕ ತನ್ನ ಸೇನೆಯನ್ನು ಕಣಕ್ಕಿಳಿಸಿದೆ ಎಂಬ ಸುದ್ದಿಗಳು ವ್ಯಾಪಕ ವೈರಲ್ ಆಗುತ್ತಿವೆ. ಹೌದು.. ಖಾರ್ಗ್ ದ್ವೀಪ ಮತ್ತು ಹಾರ್ಮುಜ್ ಜಲಸಂಧಿಯ ಬಳಿಯ ಕರಾವಳಿ ಸ್ಥಳಗಳ ಮೇಲಿನ ಸೇನಾ ದಾಳಿಗಳು ಸೇರಿದಂತೆ ಇರಾನ್‌ನಲ್ಲಿ ವಾರಗಳ ಕಾಲ ನೆಲದ ಕಾರ್ಯಾಚರಣೆಗಳಿಗೆ ಪೆಂಟಗನ್ ಸಿದ್ಧತೆ ನಡೆಸುತ್ತಿದೆ ಎಂದು ವಾಷಿಂಗ್ಟನ್ ಪೋಸ್ಟ್ ಶನಿವಾರ ವರದಿ ಮಾಡಿದೆ. ವಿಶೇಷ ಕಾರ್ಯಾಚರಣೆಗಳು ಮತ್ತು ಸಾಂಪ್ರದಾಯಿಕ ಪದಾತಿ […]
ಉಪಚುನಾವಣೆ ಫಲಿತಾಂಶಕ್ಕೂ, ಸಿಎಂ ಕುರ್ಚಿಗೂ ಲಿಂಕ್ ಮಾಡಬೇಡಿ’: ಸಿಎಂ ಸಿದ್ದರಾಮಯ್ಯ ಹೀಗೆ ಹೇಳಿದ್ಯಾಕೆ?

ಮೈಸೂರು: ಮುಂದಿನ ತಿಂಗಳು ನಡೆಯಲಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಉಪ ಚುನಾವಣೆಯಲ್ಲಿ ನಮ್ಮ ಪಕ್ಷವು ಎರಡೂ ಸ್ಥಾನಗಳನ್ನು ಉಳಿಸಿಕೊಳ್ಳುತ್ತದೆ ಎಂದರು. ದಾವಣಗೆರೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧದ ಬಂಡಾಯವನ್ನು ಶಮನಗೊಳಿಸಲಾಗಿದೆ, ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂದು ಸಿಎಂ […]
