ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಪ್ರಚಾರವನ್ನು ಚುರುಕುಗೊಳಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಶನಿವಾರ ಟಿಎಂಸಿ ಸರ್ಕಾರದ ವಿರುದ್ಧ ‘ಚಾರ್ಜ್ ಶೀಟ್’ ಬಿಡುಗಡೆ ಮಾಡಿದ್ದಾರೆ ಮತ್ತು ಈ ಚುನಾವಣೆ ಕೇವಲ ರಾಜ್ಯಕ್ಕಾಗಿ ಮಾತ್ರವಲ್ಲದೆ ದೇಶದ ಭದ್ರತೆಗಾಗಿ ಒಂದು ಯುದ್ಧವಾಗಿದೆ ಎಂದಿದ್ದಾರೆ.

ಇಂದು ಕೋಲ್ಕತ್ತಾದಲ್ಲಿ ಆಡಳಿತಾರೂಢ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, 15 ವರ್ಷಗಳ ಆಡಳಿತದಲ್ಲಿ ರಾಜ್ಯವು, “ಒಳನುಸುಳುವಿಕೆ, ರಾಜಿ ರಾಜಕೀಯದಿಂದ ದೇಶದ ಗಡಿ ಅಭದ್ರತೆಗೆ ಪ್ರಮುಖ ಕಾರಿಡಾರ್” ಆಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು.

“ದೇಶದ ಭದ್ರತೆಯ ದೃಷ್ಟಿಯಿಂದ ಪಶ್ಚಿಮ ಬಂಗಾಳ ಚುನಾವಣೆ ರಾಜ್ಯಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಅತ್ಯಂತ ಮುಖ್ಯವಾಗಿದೆ” ಎಂದು ಅಮಿತ್ ಶಾ ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಸ್ಸಾಂ ಮೂಲಕ ಒಳನುಸುಳುವಿಕೆ ಮಾರ್ಗಗಳನ್ನು “ಮುಚ್ಚಲಾಗುವುದು” ಎಂದು ಹೇಳಿದ ಅಮಿತ್ ಶಾ, ಪಶ್ಚಿಮ ಬಂಗಾಳವು ಈಗ ಒಳನುಸುಳುವಿಕೆಗೆ “ಉಳಿದಿರುವ ಏಕೈಕ ಮಾರ್ಗ” ಎಂದು ಆರೋಪಿಸಿದರು.

“ಒಳನುಸುಳುವವರು ದೇಶಕ್ಕೆ ಪ್ರವೇಶಿಸಿ ಗಲಭೆಗಳನ್ನು ಸೃಷ್ಟಿಸುತ್ತಿರುವ ಏಕೈಕ ರಾಜ್ಯ ಪಶ್ಚಿಮ ಬಂಗಾಳ” ಎಂದು ಅವರು ಅಮಿತ್ ಶಾ ಹೇಳಿದರು.

Leave a Reply

Your email address will not be published. Required fields are marked *

error: Content is protected !!
Don`t copy text! This Content is Protected