ಬೆಂಗಳೂರು ಕೋಗಿಲು ಬಳಿಯಲ್ಲಿನ ಫಕೀರ್ ಬಡಾವಣೆಯಲ್ಲಿನ ಸಾವಿರಾರು ಜನರನ್ನು ಏಕಕಾಲಕ್ಕೆ ನಿರ್ಗತಿಕರನ್ನಾಗಿ ಮಾಡಲಾಗಿದ್ದ ರಾಜ್ಯ ಕಾಂಗ್ರೇಸ್ ಸರಕಾರದ ಬುಲ್ಡೋಜರ್ ಘಟನೆಯನ್ನು ವಿರೋಧಿಸಿ ಇಂಡಿಯನ್ ಯೂನಿಯನ್ ಮುಸ್ಲಿಂಲೀಗ್ ರಾಷ್ಟ್ರೀಯ ಕಾರ್ಯದರ್ಶಿ ಜ|| ಸಿ.ಕೆ ಝುಬೈರ್ ನೇತೃತ್ವದ ನಿಯೋಗ ರಾಜ್ಯದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯರನ್ನು ಬೇಟಿ ಮಾಡಿತು.
ಆ ಕುಟುಂಬಗಳಿಗೆ ಶೀಘ್ರವಾಗಿ ಪುನರ್ವಸತಿ ಕಲ್ಪಿಸಿಕೊಡಬೇಕೆಂದು ನಿಯೋಗ ರಾಜ್ಯ ಸರಕಾರವನ್ನು ಆಗ್ರಹಿಸಿತು. ನಿಯೋಗವು ರಾಜ್ಯ ಸರಕಾರದ ಅಲ್ಪ ಸಂಖ್ಯಾತರ ಕಲ್ಯಾಣ ಮತ್ತು ಹಜ್, ವಕಫ್ ಸಚಿವರಾದ ಜ|| ಬಿ.ಝಡ್. ಜಮೀರ್ ಅಹ್ಮದ್ ಖಾನರ್ವರನ್ನೂ ಬೇಟಿಯಾಗಿ ಚರ್ಚಿಸಿತು. ನಿಯೋಗದಲ್ಲಿ ರಾಷ್ಟ್ರೀಯ ಮುಸ್ಲಿಂ ಯೂತ್ ಲೀಗ್ ನಾಯಕ ಅಡ್ವಕೇಟ್ ಫೈಝಲ್ ಬಾಬು, ಸೆಯ್ಯದ್ ಸಿದ್ದೀಖ್ ತಂಙಳ್, ಕೇರಳ ಮೂಲದ ಕರ್ನಾಟಕ ರಾಜ್ಯ ಕಾಂಗ್ರೇಸ್ ಮೈನಾರಿಟಿ ಡಿಪಾರ್ಟ್’ಮೆಂಟ್ ಪ್ರಧಾನ ಕಾರ್ಯದರ್ಶಿ ಮುನೀರ್ ಹೆಬ್ಬಾಳ ಮುಂತಾದವರು ಉಪಸ್ಥಿತರಿದ್ದರು.
