*ಮಂಗಳೂರು :* ಮೂಡುಶೆಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಲಿಕುಳ ಮೃಗಾಲಯದಿಂದ ಎದುರುಪದವು ವರೆಗೆ ರಸ್ತೆಯಲ್ಲಿ ಬೀದಿ ದೀಪಗಳು ಉರಿಯದೆ ಹಲವು ಸಮಯಗಳಾಗಿದ್ದು, ಕಳ್ಳರು, ದರೋಡೆಕೋರರು ಮತ್ತು ಪ್ರಾಣಿಗಳ ಹಾವಳಿಯಿಂದ ವಾಹನ ಸವಾರರು, ಮಹಿಳೆಯರು ರಾತ್ರಿ ವೇಳೆ ಸಂಚರಿಸಲು ಭಯಪಡುತ್ತಿದ್ದಾರೆ. ಈ ಸಂಬಂಧ ಎಸ್ಡಿಪಿಐ ಮೂಡುಶೆಡ್ಡೆ ಗ್ರಾಮ ಸಮಿತಿ ವತಿಯಿಂದ ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ನೀಡಿದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಇದೀಗ ದಿನಾಂಕ 10/01/2026 ರಂದು ಮತ್ತೊಮ್ಮೆ ಎಸ್ಡಿಪಿಐ ಮೂಡುಶೆಡ್ಡೆ ಗ್ರಾಮ ಸಮಿತಿ ನಿಯೋಗವು ಗ್ರಾಮ ಸಮಿತಿ ಅಧ್ಯಕ್ಷರಾದ ರಿಯಾಝ್ ರವರ ನೇತೃತ್ವದಲ್ಲಿ ಮೂಡುಶೆಡ್ಡೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ(PDO) ಯವರನ್ನು ಭೇಟಿ ಮಾಡಿ ಬೀದಿ ದೀಪಗಳು ಅಳವಡಿಸುವಂತೆ ಮನವಿ ಮಾಡಲಾಯಿತು. ನಮ್ಮ ಮನವಿ ಸ್ವೀಕರಿಸಿದ PDO ರವರು ಶೀಘ್ರದಲ್ಲೇ ಬೀದಿ ದೀಪಗಳನ್ನು ಅಳವಡಿಸುವುದಾಗಿ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಎಸ್ಡಿಪಿಐ ಅಡ್ಯಾರ್ ಬ್ಲಾಕ್ ಸಮಿತಿ ಕಾರ್ಯದರ್ಶಿ ಇಕ್ಬಾಲ್ ವಾಮಂಜೂರು, ಗ್ರಾಮ ಸಮಿತಿ ಕಾರ್ಯದರ್ಶಿ ಸಿರಾಜ್, ಗ್ರಾಮ ಪಂಚಾಯತ್ ಸದಸ್ಯರಾದ ಶಾಜುದ್ದೀನ್, ಎಸ್ಡಿಪಿಐ ಮುಖಂಡ ಸೈಫುದ್ದೀನ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!
Don`t copy text! This Content is Protected