ಉಳ್ಳಾಲ.ಕೇವಲ ಕ್ರೀಡೆಗೆ ಮಾತ್ರ ಸೀಮಿತಗೊಳ್ಳದೆ ಸಮಾಜ ಸೇವೆ ಮಾನವೀಯ ಸೇವೆ ಹಾಗೂ ಜನಪರ ಕೆಲಸ ಕಾರ್ಯ ಮಾಡುವ ಮೂಲಕ ಜನಮನ್ನಣೆ ಗಳಿಸಿದ ಪ್ರತಿಷ್ಠಿತ ಸಂಸ್ಥೆಯಾದ”KFC ಫೀ ಸಬೀಲಿಲ್ಲಾ”ಕೋಟೆಪುರ ಉಳ್ಳಾಲ ವತಿಯಿಂದ ಕೋಟೆಪುರ ಪರಿಸರದಲ್ಲಿ ಹಲವು ವರ್ಷಗಳಿಂದ ಯಾವುದೇ ಫಲಾ ಫೆಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಬಿಡುವಿಲ್ಲದ ತನ್ನ ವೃತ್ತಿಯ ಮಧ್ಯೆಯೂ ರಾತ್ರಿ ಹಗಲು ಎನ್ನದೆ ದಫನ್ ಕಾರ್ಯ ನಿರ್ವಹಿಸುವ ಅರ್ಹರಿಗೆ ಅರ್ಹತೆಗೆ ತಕ್ಕಂತೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಯಶಸ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೋಟೆಪುರ ಜುಮ್ಮಾ ಮಸೀದಿಯ ಖತೀಬರಾದ ಬಹು.ಇರ್ಷಾದ್ ಸಖಾಫಿ ಉಸ್ತಾದ್ ಅವರು ಹಿರಿಯರ ಹಾಗೂ ಯುವಕರ ಈ ಉತ್ತಮ ಕೆಲಸ ಕಾರ್ಯ ಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಸ್ಮರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕೋಟೆಪುರ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಯು ಕೆ ಅಬ್ಬಾಸ್, ಉಪಾಧ್ಯಕ್ಷ ರಾದ ಕೆ ಅಬೂಬಕ್ಕರ್,ಕೇಂದ್ರ ಜುಮ್ಮಾ ಮಸೀದಿಯ ಮಾಜಿ ಉಪಾಧ್ಯಕ್ಷರಾದ ಯು ಕೆ ಮೋನು ಇಸ್ಮಾಯಿಲ್,ಅಧ್ಕರ್ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಹಸನ್ ಬಿ.ಸಿ ಹಾಗೂ ಟ್ರಸ್ಟಿ ಬಸೀರ್ ಯು ಟಿ ಕೋಟೆಪುರ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷರಾದ ಶರೀಫ್ ಹಸನ್ ಹಾಗೂ ಮೊಹಮ್ಮದ್ ಮೂಸಾ ರವರು ಉಪಸ್ಥಿತರಿದ್ದರು.

error: Content is protected !!
Don`t copy text! This Content is Protected