ದಿನಾಂಕ 04/02/2026ರಂದು ತಲಪಾಡಿ ಗ್ರಾಮ ಪಂಚಾಯತ್ ಮೌಲಾನ ಡಾಕ್ಟರ್ ಎ ಪಿ ಜೆ ಅಬ್ದುಲ್ ಕಲಾಂ ಸಭಾ ಭವನ ದಲ್ಲಿ (2025/ 2026 ನೇ ಸಾಲಿನ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ ನಡೆಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಸ್ಮಾಯಿಲ್ ಟಿ, ಉಪಾಧ್ಯಕ್ಷ ಶ್ರೀಮತಿ ಸೀತಾ ವಹಿಸಿಕೊಂಡರು, ಸ್ವಾಗತ ಭಾಷಣವನ್ನು ತಲಪಾಡಿ ಗ್ರಾಮ ಪಂಚಾಯತ್ VRW ಶರ್ಮಿಳಾ ನೆರವೇರಿಸಿದರು,
ಇ ಸಂಧರ್ಭದಲ್ಲಿ ವಿಕಲಚೇತನರಿಗೆ ಸರಕಾರದಿಂದ ಸಿಗುವ ಸವಲತ್ತು ಸೌಲಭ್ಯ ಸೌಖ್ಯರ್ಯ ಗಳ ಮಾಹಿತಿಯನ್ನು “ವಿಕಲ ಚೇತನರ ಇಲಾಖೆಯ “ತಾಲೂಕು ಸಂಯೋಜಕರಾದ ಶ್ರೀಯುತ ಜಯಪ್ರಕಾಶ್ ತಚ್ಚಾನಿ ಇವರುಮಾಹಿತಿ ನೀಡಿದರು
ಇದೇ ಸಂದರ್ಭದಲ್ಲಿ (ತಲಪಾಡಿ ಗ್ರಾಮದ ಸುಮಾರು 18 ವಿಕಲಚೇತನರಿಗೆ ಕಾದಿರಿಸಿದ, ನಿಧಿಯಲ್ಲಿ ವೈದ್ಯಕೀಯ ಚಿಕಿತ್ಸೆ ಯ ನೆರವಿಗಾಗಿ ಪರಿಹಾರದ ರೂಪದಲ್ಲಿ ಸುಮಾರು 18 ಫಲಾನುಭವಿಗಳಿಗೆ, ತಲಾ 5 ಸಾವಿರ ರೂಪಾಯಿ ಚೆಕ್ ವಿತರಣೆ ಮಾಡಲಾಯಿತು,
*ಇಂದಿನ ವಿಶೇಷ ವಿಕಲಚೇತನ ಕಾರ್ಯ ಕ್ರಮದಲ್ಲಿ, ತಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ತಾಲೂಕು ವಿಕಲಚೇತನ ಇಲಾಖೆಯ ಸಂಯೋಜಕರಾದ ಜಯ ಪ್ರಕಾಶ್ ತಚ್ಚಾನಿ, VRW ಶರ್ಮಿಳಾ ಮೇಡಂ, *ಪಂಚಾಯಿತಿ ಕಾರ್ಯದರ್ಶಿ ಲಲಿತಾ ಮೇಡಂ, ಸಹಾಯಕ ಲೆಕ್ಕಾಧಿಕಾರಿ ಮಂಜಪ್ಪ*
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ, ಹಾಗೂ ಗ್ರಾಮ ಪಂಚಾಯತ್ ನ ಹಾಲಿ ಮಾಜಿ ಸದಸ್ಯರುಗಳು,ಸಾಮಾಜಿಕ ಕಾರ್ಯ ಕರ್ತರಾದ ಸೋಶಿಯಲ್ ಫಾರೂಕ್, ಪೊಲೀಸ್ ಅಧಿಕಾರಿ ಸೇರಿ ತಲಪಾಡಿ ಗ್ರಾಮ ಪಂಚಾಯತ್ ಸಿಬಂದಿ ವರ್ಗ, ಆಶಾ ಕಾರ್ಯಕರ್ತರು,ಅಂಗನವಾಡಿ ಕಾರ್ಯಕರ್ತರು, ವಿಕಲಚೇತನರು,ಸೇರಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಹಾಜರಿದ್ದರು
ಸುದ್ದಿ ಜಾಲ ತಲಪಾಡಿ,
ವರದಿ ಇತೀ ಸೋಶಿಯಲ್ ಫಾರೂಕ್ ಸಾಮಾಜಿಕ ಕಾರ್ಯ ಕರ್ತರು
ವಿಶೇಷ ವಾಗಿ ತಲಪಾಡಿ ಗ್ರಾಮ ಪಂಚಾಯಿತಿ ವತಿಯಿಂದ” ವಿಕಲಚೇತನರ ವಿಶೇಷ ಗ್ರಾಮ ಸಭೆಯಲ್ಲಿ ರುಚಿಕರ ವಾದ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು,
