ಮಂಗಳೂರು-:
ಉಳ್ಳಾಲ:~
ಹಲವಾರು ಜೀವ ಕಾರುಣ್ಯ ಸೇವೆಗಳಿಂದ ಗುರುತಿಸಿಕೊಂಡ ಪ್ರಸಿದ್ಧ ಯೂತ್ ಫಾರಂ ಮಂಗಳೂರು ಸಂಸ್ಥೆಯು ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ರಂಝಾನ್ ಕಿಟ್ ವಿತರಣೆ ಕಾರ್ಯಕ್ರಮವೂ ದಾನಿಗಳ ಸಹಕಾರದೊಂದಿಗೆ ಸುಮಾರು 160 ಅರ್ಹ ಕುಟುಂಬಕ್ಕೆ ಸಂಸ್ಥೆಯ ಸ್ಥಾಪಕಧ್ಯಕ್ಷರಾದ ಮೌಶಿರ್ ಸಾಮಣಿಗೆ ರವರ ನೇತೃತ್ವದಲ್ಲಿ ನಾಟೆಕಲ್ ನಲ್ಲಿ ಜರಗಿತು.
ಕಾರ್ಯಕ್ರಮವನ್ನು ಸ್ಥಳೀಯ ಮಸೀದಿ ಇಮಾಮರಾದ ಹುಸೈನ್ ಮುಸ್ಲಿಯಾರ್ ರವರು ದುವಾಶಿವರ್ಚನ ದ ಮೂಲಕ ಚಾಲನೆ ನೀಡಿದರು.
ಈ ಒಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮೌಶಿರ್ ಸಮಾಮನಿಗೆ ರವರು ರಮಝನ್ ಉಪವಾಸ ಅನ್ನೋದು ಕೇವಲ ಹಸಿವಿನಿಂದ ಕೂಡಿದ ವೃತ ಅಲ್ಲ ಬದಲಾಗಿ ಜನರ ಹಸಿವನ್ನು ತನಿಸುವ ಕಾರ್ಯದಲ್ಲೂ ನಾವುಗಳು ಯಶಸ್ಸು ಕಾಣಬೇಕು. ಧಾನ ಧರ್ಮಕ್ಕೆ ಇಸ್ಲಾಮಿನಲ್ಲಿ ಭಹಳ ಪ್ರಾಮುಖ್ಯತೆ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ NNRV ಇದರ ಮಾಜಿ ಅಧ್ಯಕ್ಷರಾದ ಹಾಶಿಮ್ ಬಂಡಸಾಲೆ ರವರು ಮಾತನಾಡಿ ಯೂತ್ ಫಾರಂ ಸೇವೆಯ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಯೂತ್ ಫಾರಂ ಮಂಗಳೂರು ಇದರ ಅಧ್ಯಕ್ಷರಾದ
ಆರ್ .ಕೆ ರೀಯಾಝ್, UTs ಸೋಶಿಯಲ್ ಕ್ಲಬ್ ನ ರಾಜ್ಯಧ್ಯಕ್ಷ ನಝಿರ್ ಬಾರ್ಲಿ, ದೇರಳಕಟ್ಟೆ ಹಿರಿಯ ಕಾಂಗ್ರೆಸ್ ಮುಖಂಡ ಲತೀಫ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.
YFM ಉಪಾಧ್ಯಕ್ಷರಾದ ಕರವೇ ರಾಝಿಕ್ ಆತೂರ್ ರವರು ಸ್ವಾಗತಿಸಿ ನಿರೂಪಿಸಿ ವಂದಿಸಿದರು.
