ಬೆಂಗಳೂರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ಘಟಕ ಇದರ ಮಾಸಿಕ ಸಭೆಯು 24 ಸೆಪ್ಟೆಂಬರ್ 25 ಬುಧವಾರ ಬೆಳಿಗ್ಗೆ 11 ಗಂಟೆಗೆ ಎಐಸಿಸಿ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರು ರಾಜ್ಯ ಗ್ಯಾರಂಟಿ ಯೋಜನೆ ಸನ್ಮಾನ್ಯ ಶ್ರೀ ಸೂರಜ್ ಹೆಗಡೆ ಹಾಗೂ ಕಾರ್ಮಿಕ ಘಟಕದ ರಾಜ್ಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಪುಟ್ಟಸ್ವಾಮಿ ಗೌಡ ಹಾಗೂ ಉಪಾಧ್ಯಕ್ಷರಾದ ಹರಿಣಿ ಗೌಡ ರವರ ನೇತೃತ್ವದಲ್ಲಿ ಕೆಪಿಸಿಸಿಯ ಮುಖ್ಯ ಕಚೇರಿಯಲ್ಲಿ ಜರಗಿತು ಈ ಸಭೆಯಲ್ಲಿ ಮುಂಬರುವ ತಾಲೂಕು ಪಂಚಾಯತ್ ಚುನಾವಣೆ ಜಿಲ್ಲಾ ಚುನಾವಣೆ ಮತ್ತು ಮಹಾನಗರ ಪಾಲಿಕೆಯ ಚುನಾವಣೆ ಇದರ ಉಸ್ತುವಾರಿಗಳನ್ನು ನೇಮಕ ಮಾಡುವ ಪ್ರಕ್ರಿಯೆ ನಡೆಯಿತು
ಅದರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿಯನ್ನು ಕರ್ನಾಟಕ ರಾಜ್ಯ ಕಾಂಗ್ರೆಸ್ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿಯಾದ ವಹಾಬ್ ಕುದ್ರೋಳಿ ಯವರಿಗೆ ನೀಡಲಾಯಿತು ಹಾಗೆಯೇ ವಹಾಬ್ ಕುದ್ರೋಳಿ ಯವರು ಈ ಮೊದಲು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಲೋಕಸಭಾ ಚುನಾವಣೆಯ ಉಸ್ತುವಾರಿಯಾಗಿಯು, ನೈರುತ್ಯ ಪದವೀಧರ ಕ್ಷೇತ್ರದ ಸುರತ್ಕಲ್ ಕ್ಷೇತ್ರದ ಉಸ್ತುವಾರಿಯಾಗಿಯೂ ಉಳ್ಳಾಲ ಕಾಟೊಂಗೆರೆ ವಾರ್ಡಿನ ಪಂಚಾಯತ್ ಚುನಾವಣೆಯ ಉಸ್ತುವಾರಿಯಾಗಿಯು ಮಂಗಳೂರು ಮಹಾನಗರ ಪಾಲಿಕೆಯ ಬೋಳೂರು ವಾರ್ಡಿನ ಉಸ್ತುವಾರ ಆಗಿಯೂ ಅನುಭವವಿರುವ ಒಬ್ಬ ನಾಯಕರಾಗಿದ್ದಾರೆ ಮುಂಬರುವ ಎಲ್ಲಾ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯನ್ನು ಬಲಿಷ್ಠ ಮಟ್ಟಕ್ಕೆ ತರುವಲ್ಲಿ ಯಶಸ್ವಿಯಾಗಲಿ ಎಂದು ಅವರ ನಿಕಟವರ್ತಿಗಳು ಮಾಧ್ಯಮ ಮೂಲಕ ಆಶೀರ್ವದಿಸಿದ್ದಾರೆ,……

error: Content is protected !!
Don`t copy text! This Content is Protected