ಕೋಲಾರ, ಡಿ.23: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ಕೋಲಾರ ಜಿಲ್ಲಾ ಕಾರ್ಯಕಾರಿಣಿ ಸಮಿತಿ ನೂತನ ಅಧ್ಯಕ್ಷರಾಗಿ ಟಿಪ್ಪು ಸುಲ್ತಾನ್ ಮುಳಬಾಗಿಲು, ಉಪಾಧ್ಯಕ್ಷರಾಗಿ ಅಫ್ಸರ್ ಕೋಲಾರ, ಪ್ರಧಾನ ಕಾರ್ಯದರ್ಶಿಯಾಗಿ ಮುದಸ್ಸಿರ್ ಕೋಲಾರ, ಕಾರ್ಯದರ್ಶಿಯಾಗಿ ಎಸ್ ಬಾಬು ಮುಳಬಾಗಿಲು, ಕೋಶಾಧಿಕಾರಿಯಾಗಿ ಸೆಯ್ಯದ್ ಮುಬಾರಕ್ ಕೋಲಾರ, ಸದಸ್ಯರಾಗಿ ಝಕೀವುಲ್ಲಾ ಮುಳಬಾಗಿಲು, ಸೆಯ್ಯದ್ ಮುದಸ್ಸಿರ್ ಮುಳಬಾಗಿಲು, ಝಬೀವುಲ್ಲಾ ಮುಳಬಾಗಿಲು, ಮುಮ್ತಾಝ್ ಪಾಷಾ ಮುಳಬಾಗಿಲು, ಇಮ್ತಿಯಾಜ್ ಖಾನ್ ಕೋಲಾರ, ರಿಯಾಝ್ ಪಾಷಾ ಕೋಲಾರ ಆಯ್ಕೆಯಾದರು
ಆಯ್ಕೆ ಪ್ರಕ್ರಿಯೆ ನಡೆಸಿ ಮಾತನಾಡಿದ SDTU ರಾಜ್ಯ ಸಹ ಸಂಚಾಲಕ ಖಾದರ್ ಫರಂಗಿಪೇಟೆ ಸರಕಾರ ಮತ್ತು ಕಾರ್ಮಿಕರ ನಡುವೆ ಒಂದು ಸೇತುವೆಯಾಗಿ ಎಸ್ಡಿಟಿಯು ಸಂಘಟಿತ ಸೇವೆ ನೀಡುತ್ತಾ ಬಂದಿದೆ ಮಾತ್ರವಲ್ಲ ಕಾರ್ಮಿಕರ ಹಕ್ಕು ಮತ್ತು ಅವಕಾಶಗಳಿಗಾಗಿ ಕೂಡಾ ನಿರಂತರ ಹೋರಾಟ ನಡೆಸುತ್ತಾ ಅವರನ್ನು ಪ್ರಬುದ್ಧರಾಗಿ ಮಾಡುವ ದ್ಯೇಯದೊಂದಿಗೆ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದರು
