ಬೆಂಗಳೂರು ಕೋಗಿಲು ಬಳಿಯಲ್ಲಿನ ಫಕೀರ್ ಬಡಾವಣೆಯಲ್ಲಿನ ಸಾವಿರಾರು ಜನರನ್ನು ಏಕಕಾಲಕ್ಕೆ ನಿರ್ಗತಿಕರನ್ನಾಗಿ ಮಾಡಲಾಗಿದ್ದ ರಾಜ್ಯ ಕಾಂಗ್ರೇಸ್ ಸರಕಾರದ ಬುಲ್ಡೋಜರ್ ಘಟನೆಯನ್ನು ವಿರೋಧಿಸಿ ಇಂಡಿಯನ್ ಯೂನಿಯನ್ ಮುಸ್ಲಿಂ‌ಲೀಗ್ ರಾಷ್ಟ್ರೀಯ ಕಾರ್ಯದರ್ಶಿ ಜ|| ಸಿ.ಕೆ ಝುಬೈರ್ ನೇತೃತ್ವದ ನಿಯೋಗ ರಾಜ್ಯದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯರನ್ನು ಬೇಟಿ ಮಾಡಿತು.

ಆ ಕುಟುಂಬಗಳಿಗೆ ಶೀಘ್ರವಾಗಿ ಪುನರ್ವಸತಿ ಕಲ್ಪಿಸಿಕೊಡಬೇಕೆಂದು ನಿಯೋಗ ರಾಜ್ಯ ಸರಕಾರವನ್ನು ಆಗ್ರಹಿಸಿತು. ನಿಯೋಗವು ರಾಜ್ಯ ಸರಕಾರದ ಅಲ್ಪ ಸಂಖ್ಯಾತರ ಕಲ್ಯಾಣ ಮತ್ತು ಹಜ್, ವಕಫ್ ಸಚಿವರಾದ || ಬಿ.ಝಡ್. ಜಮೀರ್ ಅಹ್ಮದ್ ಖಾನರ್ವರನ್ನೂ ಬೇಟಿಯಾಗಿ ಚರ್ಚಿಸಿತು. ನಿಯೋಗದಲ್ಲಿ ರಾಷ್ಟ್ರೀಯ ಮುಸ್ಲಿಂ ಯೂತ್ ಲೀಗ್ ನಾಯಕ ಅಡ್ವಕೇಟ್ ಫೈಝಲ್ ಬಾಬು, ಸೆಯ್ಯದ್ ಸಿದ್ದೀಖ್ ತಂಙಳ್, ಕೇರಳ ಮೂಲದ ಕರ್ನಾಟಕ ರಾಜ್ಯ ಕಾಂಗ್ರೇಸ್ ಮೈನಾರಿಟಿ ಡಿಪಾರ್ಟ್’ಮೆಂಟ್ ಪ್ರಧಾನ ಕಾರ್ಯದರ್ಶಿ ಮುನೀರ್ ಹೆಬ್ಬಾಳ ಮುಂತಾದವರು ಉಪಸ್ಥಿತರಿದ್ದರು.

error: Content is protected !!
Don`t copy text! This Content is Protected