ಸುಳ್ಯ ದಿಂದ ಮೂಲ್ಕಿ ವರೆಗಿನ ಕಾಂಗ್ರೆಸ್
ಪಾದಯಾತ್ರೆಯಲ್ಲಿ ಭಾಗಿಯಾದೆವು ಎಂದು ಲಕ್ಕಿ ಸ್ಟಾರ್ ನಾಸಿರ್ ಶಾನ್ ಮಿಡಿಯಾ ವರದಿಗಾರರಿಗೆ ತಿಳಿಸಿದ್ದಾರೆ.
ಮನರೇಗಾ ಯೋಜನೆಯಿಂದ ಮಹಾತ್ಮ ಗಾಂಧಿಜೀ ಹೆಸರನ್ನು ತೆಗೆದು ಹಾಕಿ ಅನುದಾನವನ್ನು ಕಡಿತಗೊಳಿಸಿ ಗಾಂಧಿ ತತ್ವದ ಮೇಲೆ ದ್ವೇಷ ಸಾಧಿಸುವ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡ ಪಾದಯಾತ್ರೆಯಲ್ಲಿ ದ.ಕ.ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ನಾಸೀರ್ ಲಕ್ಕಿ ಸ್ಟಾರ್ ನೂರಾರು ಕಾರ್ಯಕರ್ತರೊಂದಿಗೆ ಭಾಗಿಯಾಗಿದರು. ಮಾಜೀ ಸಚಿವ ಜಯಪ್ರಕಾಶ್ ಹೆಗ್ಡೆ, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕನಿಷ್ಠ ವೇತನ ಆಯೋಗದ ಅಧ್ಯಕ್ಷ ಟಿ.ಎಂ.ಸಯಿದ್, ಗೇರುಬೀಜ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ , ವಕೀಲ ವಿನಯ್ ರಾಜ್, ಮಾಜೀ ಶಾಸಕ ಜೆ ಆರ್ ಲೋಬೋ, ಶಶಿಧರ್ ಹೆಗ್ಡೆ, ನೂರುದ್ದೀನ್ ಸಾಲ್ಮರ ಹಾಗೂ ಜಿಲ್ಲೆಯ ಹಲವು ಪ್ರಮುಖ ಮುಖಂಡರು ಮತ ಕಾರ್ಯಕರ್ತರು ಪಾದಯಾತ್ರೆಯಲ್ಲಿ ತೆರಳಿದರು.

error: Content is protected !!
Don`t copy text! This Content is Protected