ಕೊಡಗು ಜಿಲ್ಲಾ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ವತಿಯಿಂದ ದಿನಾಂಕ 11.2. 26 ಬುಧವಾರದಂದು ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ರವರನ್ನು ಎಸ್ ಡಿ ಟಿ ಯು. ನಿಯೋಗ ಕಚೇರಿಯಲ್ಲಿ ಭೇಟಿಯಾಗಿ ಜಿಲ್ಲಾಸ್ಪತ್ರೆಗೆ ಆಗಮಿಸುವ ಕಾರ್ಮಿಕ ತುರ್ತು ರೋಗಿಗಳಿಗೆ ಹಾಗೂ ಸಂಬಂಧಿಕರಿಗೆ ಸರತಿ ಸಾಲಿನಲ್ಲಿ ನಿಂತು ಚಿಕಿತ್ಸೆಗೆ. ಬೇಕಾದ ದಾಖಲಾತಿಗಳನ್ನು ನೀಡಲು. ತೊಂದರೆಯಾಗುವ ಕಾರಣದಿಂದ ಇದನ್ನು ಮನಗಂಡ ನಮ್ಮ ಯೂನಿಯನ್ ಸರ್ಜನ್ ರವರನ್ನು ಭೇಟಿಯಾಗಿ ಕಾರ್ಮಿಕರ ಹಾಗೂ ನಾಗರಿಕರ ಪರವಾಗಿ ಮನವಿ ಸಲ್ಲಿಸಲಾಯಿತು. ಇದಕ್ಕೆ ಸ್ಪಂದಿಸಿದ ಜಿಲ್ಲಾ ಸರ್ಜನ್ ರವರು ತುರ್ತು ರೋಗಿಗಳಿಗೆ ದಾಖಲಾತಿಯ ವಿಷಯದಲ್ಲಿ ವಿನಂತಿ ನೀಡಿ ಚಿಕಿತ್ಸೆಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು. ನಿಯೋಗದಲ್ಲಿ ಜಿಲ್ಲಾಧ್ಯಕ್ಷರಾದ ಅಣ್ಣ ಶರೀಫ್. ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಜಾಕ್ ಎಂಎ. ಸದಸ್ಯರಾದ ಶ್ರೀಮತಿ ಹಸೀನಾ. ಸಾಮಾಜಿಕ ಕಾರ್ಯಕರ್ತರಾದಂತಹ ಸಾಜಿದ್ ಹಾಗೂ ಸದಸ್ಯರು ಹಾಜರಿದ್ದರು

error: Content is protected !!
Don`t copy text! This Content is Protected