ಬೆಂಗಳೂರು: ಟೀ ಅಂಗಡಿಯಲ್ಲಿ ಕ್ಯಾಬ್ ಚಾಲಕರ ಮೇಲೆ ದುಷ್ಕರ್ಮಿಗಳ ದಾಳಿ, ಮನಸೋ ಇಚ್ಛೆ ಹಲ್ಲೆ..!

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಶೆಟ್ಟಿಗೆರೆಯಲ್ಲಿ ಕಾರುಗಳ ನಿಲ್ಲಿಸಿ ರಸ್ತೆಬದಿಯ ಟೀ ಅಂಗಡಿಯಲ್ಲಿ ಚಹಾ ಕುಡಿಯುತ್ತಿದ್ದ ಇಬ್ಬರು ಕ್ಯಾಬ್ ಚಾಲಕರ ಮೇಲೆ 10ಕ್ಕೂ ಹೆಚ್ಚು ದುಷ್ಕರ್ಮಿಗಳ ತಂಡ ದಾಳಿ ನಡೆಸಿದ್ದು, ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಭಾನುವಾರ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದಾಳಿಗೊಳಗಾದ ಚಾಲಕರನ್ನು ಜ್ಞಾನಭಾರತಿ ಬಳಿಯ ಮರಿಯಪ್ಪನ ಪಾಳ್ಯದ ಕೆ.ಎಸ್. ಬಸವರಾಜು (37) ಮತ್ತು ಕೆ.ಎಸ್. ಲೇಔಟ್ 1ನೇ ಹಂತದ ಜನಾರ್ದನ್ (29) ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ […]

ಹಲ್ಲೆ ಬಳಿಕ ಸುರಕ್ಷತೆಗಾಗಿ ಚಾಲಕರ ಪ್ರತಿಭಟನೆ: ಕೇರಳ, ದಕ್ಷಿಣ ಭಾರತದ ನಗರಗಳ ನಡುವೆ ಖಾಸಗಿ ಬಸ್ ಸೇವೆ ಸ್ಥಗಿತ!

ಬೆಂಗಳೂರು: ಚಾಲಕರ ಮೇಲಿನ ಹಲ್ಲೆಯ ನಂತರ ಸುರಕ್ಷತೆಯ ಕಾರಣಗಳನ್ನು ನೀಡಿ ಹಲವಾರು ಖಾಸಗಿ ಐಷಾರಾಮಿ ಬಸ್ ನಿರ್ವಾಹಕರು ಟ್ರಿಪ್ ರದ್ದುಗೊಳಿಸಿದ್ದರಿಂದ ಕೇರಳ ಮತ್ತು ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ನಂತಹ ದಕ್ಷಿಣ ಭಾರತದ ಪ್ರಮುಖ ನಗರಗಳ ನಡುವೆ ಪ್ರಯಾಣಿಸುತ್ತಿದ್ದ ಹಲವಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರ್ವಾಹಕರ ಪ್ರಕಾರ, ಕೇರಳದ ಗಡಿಯ ಬಳಿ ತಮ್ಮ ಸಹೋದ್ಯೋಗಿಗಳೊಬ್ಬರ ಮೇಲೆ ಸಮಾಜ ವಿರೋಧಿ ಶಕ್ತಿಗಳು ದಾಳಿ ಮಾಡಿದ ವರದಿಯ ನಂತರ ಸೂಕ್ತ ರಕ್ಷಣೆಗೆ ಒತ್ತಾಯಿಸಿ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಚಾಲಕರು ಕಳೆದ ರಾತ್ರಿ ತಮ್ಮ […]

Big shake-up: ಎರಡೂವರೆ ವರ್ಷಗಳ ಅವಧಿ ಮುಗಿಯುತ್ತಿದ್ದಂತೆ ಶೇ.50ರಷ್ಟು ಸಚಿವರನ್ನು ಸಿದ್ದು ಕೈಬಿಡುವ ಸಾಧ್ಯತೆ?

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಕ್ಯಾಬಿನೆಟ್ ಸಚಿವರಿಗೆ ಅಕ್ಟೋಬರ್ 13 ರಂದು ಔತಣಕೂಟ ಆಯೋಜಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. AICC ಹೈಕಮಾಂಡ್‌ ಜೊತೆಗಿನ ಚರ್ಚೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯ ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸಿದ ನಂತರ ನವೆಂಬರ್‌ನಲ್ಲಿ ಸಂಪುಟ ಪುನಾರಚನೆಯನ್ನು ಕೈಗೊಳ್ಳುವ ಯೋಜನೆಯನ್ನು ಸೂಚಿಸಿದ್ದಾರೆಂದು ವರದಿಯಾಗಿದೆ. ಮೂಲಗಳ ಪ್ರಕಾರ ಹಾಲಿ ಶೇ.50ರಷ್ಟು ಸಚಿವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕುವ ಉದ್ದೇಶವನ್ನು ಮುಖ್ಯಮಂತ್ರಿ ಹೊಂದಿದ್ದಾರೆ. ನವೆಂಬರ್‌ನಲ್ಲಿ ಸುಮಾರು 15 ಹೊಸ ಸಚಿವರನ್ನು ಸೇರ್ಪಡೆಗೊಳಿಸುವುದರಿಂದ ಮುಖ್ಯಮಂತ್ರಿಯನ್ನು ತಕ್ಷಣವೇ ಬದಲಾಯಿಸಲು […]

error: Content is protected !!
Don`t copy text! This Content is Protected