ಟ್ರಂಪ್‌ಗೆ ಮತ್ತೊಂದು ಜಲಾಘಾತ: ಇರಾನ್ ಪರ ಯುದ್ಧಕ್ಕೆ ಯೆಮೆನ್ ಎಂಟ್ರಿ; ಇಸ್ರೇಲ್ ಮೇಲೆ ಮೊದಲ ಕ್ಷಿಪಣಿ ಹಾರಿಸಿದ ಹೌತಿಗಳು!

ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಇಂದು ಮಧ್ಯಪ್ರಾಚ್ಯ ಯುದ್ಧ ಪ್ರಾರಂಭವಾದ ಒಂದು ತಿಂಗಳ ನಂತರ ಇಸ್ರೇಲ್ ಮೇಲೆ ತಮ್ಮ ಮೊದಲ ದಾಳಿಯನ್ನು ಪ್ರಾರಂಭಿಸಿರುವುದಾಗಿ ಹೇಳಿಕೊಂಡಿದ್ದಾರೆ. ಯೆಮೆನ್‌ ದಾಳಿಯನ್ನು ಇಸ್ರೇಲ್ ಮಿಲಿಟರಿ ತಡೆಹಿಡಿಯುತ್ತಿದೆ ಎಂದು ಹೇಳಿದೆ. ತಮ್ಮ ಮಿತ್ರ ಇರಾನ್ ಮೇಲಿನ ದಾಳಿ ಮುಂದುವರಿದರೆ ಅಥವಾ ಹೆಚ್ಚಿನ ದೇಶಗಳು ಸಂಘರ್ಷಕ್ಕಿಳಿದರೇ ತಾವು ಪಶ್ಚಿಮ-ಏಷ್ಯಾ ಯುದ್ಧಕ್ಕೆ ಧುಮುಕುವುದಾಗಿ ಹೌತಿ ಪಡೆ ಈ ಹಿಂದೆ ಎಚ್ಚರಿಸಿತ್ತು. ಹೌತಿ ಪಡೆ ಇಸ್ರೇಲಿ ಮಿಲಿಟರಿ ನೆಲೆಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು […]

VVIP ವಿಮಾನಗಳ ಭದ್ರತಾ ನಿಯಮ ಕಠಿಣ; ಅಪಾಯಕರ ಪ್ರಯಾಣಗಳ ಅಂತಿಮ ತೀರ್ಮಾನ ಪೈಲಟ್ ಗಳ ನಿರ್ಧಾರಕ್ಕೆ ಬಿಟ್ಟ DGCA

ನವದೆಹಲಿ: ಬರಾಮತಿ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಮೃತಪಟ್ಟ ಹಿನ್ನೆಲೆಯಲ್ಲಿ ಕಂಡುಬಂದ ಭದ್ರತಾ ಲೋಪಗಳನ್ನು ಗಮನದಲ್ಲಿಟ್ಟುಕೊಂಡು, ನಾಗರಿಕ ವಿಮಾನಯಾನ ನಿಯಂತ್ರಣ ಮಹಾನಿರ್ದೇಶನಾಲಯ (DGCA) ಸಂಸ್ಥೆಯು ವಿವಿಐಪಿಗಳನ್ನು ಕರೆದೊಯ್ಯುವ ನಿಗದಿತವಲ್ಲದ ವಿಮಾನ ಸಂಚಾಲಕರಿಗೆ ಕಠಿಣ ಭದ್ರತಾ ನಿಯಮಗಳನ್ನು ಜಾರಿಗೊಳಿಸಿದೆ. ಅಪಾಯಕರ ಸನ್ನಿವೇಶಗಳಲ್ಲಿ ಪ್ರಯಾಣಗಳನ್ನು ಕೈಗೊಳ್ಳಬೇಕೇ ಬೇಡವೇ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಪೈಲಟ್‌ಗಳಿಗೆ ನೀಡಲಾಗಿದೆ. ಸಣ್ಣ ವಿಮಾನ ಇಳಿಯುವ ಮತ್ತು ಹಾರುವ ಮೈದಾನಗಳು / ಸಣ್ಣ ರನ್‌ವೇಗಳಿಗೆ(Airstrip) ಸ್ಥಳೀಯ ಅಧಿಕಾರಿಗಳಿಂದ ಲಿಖಿತ ಅನುಮತಿ, ವಿವಿಐಪಿ ಸಾಮಾನುಗಳ ತಪಾಸಣೆ […]

West Asia war: ಕುವೈತ್‌ ಪ್ರಮುಖ ತೈಲ ಶುದ್ಧೀಕರಣ ಘಟಕದ ಮೇಲೆ ಇರಾನ್ ಡ್ರೋನ್ ದಾಳಿ, ಭಾರೀ ಬೆಂಕಿ

ಕುವೈತ್: ಮಧ್ಯಪ್ರಾಚ್ಯದಲ್ಲಿ ಯುದ್ಧ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ಕುವೈತ್‌ನ ಪ್ರಮುಖ ತೈಲ ಶುದ್ಧೀಕರಣ ಘಟಕವಾದ ಮಿನಾ ಅಲ್-ಅಹ್ಮದಿ ಘಟಕದ ಮೇಲೆ ಇರಾನ್ ಮತ್ತೆ ಡ್ರೋನ್ ದಾಳಿ ನಡೆಸಿದ್ದು, ಭಾರೀ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಕುವೈತ್ ಸರ್ಕಾರದ ಮಾಹಿತಿ ಪ್ರಕಾರ, ಇದೇ ಘಟಕದ ಮೇಲೆ ಗುರುವಾರವೂ ದಾಳಿ ನಡೆದಿದ್ದು, ಅದರಿಂದಲೂ ಬೆಂಕಿ ಕಾಣಿಸಿಕೊಂಡಿತ್ತು. ಶುಕ್ರವಾರ ಮತ್ತೊಮ್ಮೆ ದಾಳಿ ನಡೆದಿದ್ದು, ಇದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿದೆ ಎಂದು ತಿಳಿಸಿದೆ. ಅಗ್ನಿಶಾಮಕ ದಳಗಳು ಬೆಂಕಿಯನ್ನು ನಿಗ್ರಹಿಸಲು ಹರಸಾಹಸ ಪಡುತ್ತಿದ್ದು, ತಕ್ಷಣದ […]

Pakistan-Taliban Conflicts: ಅಫ್ಘಾನಿಸ್ತಾನದ ಆಸ್ಪತ್ರೆ ಮೇಲೆ ಪಾಕ್ ವಾಯುದಾಳಿ; ಬೆಚ್ಚಿದ ಕಾಬುಲ್, 400 ಜನರು ಸಾವು, 250 ಗಾಯ

ಕಾಬುಲ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಯುದ್ಧ ಮುಂದುವರೆದಿದ್ದು, ಉಭಯ ರಾಷ್ಟ್ರಗಳ ಗಡಿಗಳಲ್ಲಿ ಉದ್ವಿಗ್ವ ವಾತಾವರಣ ಮತ್ತಷ್ಟು ಹೆಚ್ಚಾಗಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಪರಸ್ಪರ ಭಾರೀ ಬಾಂಬ್ ದಾಳಿ ನಡೆಸುತ್ತಿವೆ. ಸೋಮವಾರ ರಾತ್ರಿ ಪಾಕಿಸ್ತಾನ ಅಫ್ಘಾನಿಸ್ತಾನದಲ್ಲಿ ದೊಡ್ಡ ಮಟ್ಟದ ವಾಯುದಾಳಿ ನಡೆಸಿದೆ. ಕಾಬೂಲ್‌ನ ಡ್ರಗ್ ಸೆಂಟರ್ ಆಸ್ಪತ್ರೆಯ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿದ್ದು, ಕನಿಷ್ಠ 400 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ, 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಅಫ್ಘಾನಿಸ್ತಾನ ಸರ್ಕಾರದ ವಕ್ತಾರ ಹಮ್ದಲ್ಲಾ ಫಿತ್ರಾತ್ ಅವರು ಈ […]

ಸರ್ಕಾರದ ಧೋರಣೆಗೆ ಸ್ಪೀಕರ್​​ ಗರಂ: ಕಲಾಪ ಮುಂದೂಡಿ ಪೀಠದಿಂದ ಎದ್ದು ಹೊರನಡೆದ ಖಾದರ್​​

ಬೆಂಗಳೂರು, ಮಾರ್ಚ್​​ 16: ವಿಧಾನ ಸಭೆ ಅಧಿವೇಶನದ ವೇಳೆ ಶಾಸಕರ ಪ್ರಶ್ನೆಗಳಿಗೆ ಸಚಿವರು ಸರಿಯಾಗಿ ಉತ್ತರ ನೀಡದ ಕಾರಣ ಗರಂ ಆದ ಸ್ಪೀಕರ್​​ ಯು.ಟಿ. ಖಾದರ್​​ ಸಮಯ ಹೇಳದೆ ಕಲಾಪವನ್ನು ಮುಂದೂಡಿರುವ ಪ್ರಸಂಗ ನಡೆದಿದೆ. ಸಚಿವರ ನಡೆಗೆ ಬೇಸರ ವ್ಯಕ್ತಪಡಿಸಿದ ಸ್ಪೀಕರ್​​ ಉತ್ತರ ಕೊಡದಿರಲು ಕಾರಣ ಹೇಳುವವರೆಗೂ ಸದನ ನಡೆಸಲ್ಲ ಎಂದು ಕಲಾಪ ಮೊಟಕು ಮಾಡಿ ಪೀಠದಿಂದ ತೆರಳಿದ್ದಾರೆ. ಲಿಖಿತ ರೂಪದ 230 ಪ್ರಶ್ನೆಗಳ ಪೈಕಿ 84 ಪ್ರಶ್ನೆಗಳಿಗೆ ಉತ್ತರ ಮಂಡನೆ ವೇಳೆ ಈ ಪ್ರಸಂಗ ನಡೆದಿದೆ […]

ಪಶ್ಚಿಮ ಏಷ್ಯಾದಲ್ಲಿ ಭಾರೀ ಉದ್ವಿಗ್ನತೆ: ‘ಆಪರೇಷನ್ ಟ್ರೂ ಪ್ರಾಮಿಸ್ 4’ ದಾಳಿಯಲ್ಲಿ 650ಕ್ಕೂ ಹೆಚ್ಚು ಅಮೆರಿಕ ಸೈನಿಕರು ಸಾವನ್ನಪ್ಪಿದರೆಂದು ಐಆರ್‌ಜಿಸಿ ಹೇಳಿಕೆ

ಪಶ್ಚಿಮ ಏಷ್ಯಾದಾದ್ಯಂತ ಅಮೆರಿಕದ ಮಿಲಿಟರಿ ಸ್ಥಾಪನೆಗಳು ಮತ್ತು ಯುದ್ಧನೌಕೆಗಳ ವಿರುದ್ಧ ಇರಾನ್ ಸಶಸ್ತ್ರ ಪಡೆಗಳು ನಡೆಸಿದ ಪ್ರತೀಕಾರದ ಆಪರೇಷನ್ ಟ್ರೂ ಪ್ರಾಮಿಸ್ 4 ರ ಮೊದಲ ಎರಡು ದಿನಗಳಲ್ಲಿ 650 ಕ್ಕೂ ಹೆಚ್ಚು ಅಮೆರಿಕದ ಮಿಲಿಟರಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ ಕಾರ್ಪ್ಸ್ (IRGC) ವಕ್ತಾರರು ತಿಳಿಸಿದ್ದಾರೆ. “ಯುದ್ಧದ ಮೊದಲ ಎರಡು ದಿನಗಳಲ್ಲಿ, 650 ಅಮೇರಿಕನ್ ಸೈನಿಕರು ಕೊಲ್ಲಲ್ಪಟ್ಟರು ಮತ್ತು ಗಾಯಗೊಂಡರು” ಎಂದು ಬ್ರಿಗೇಡಿಯರ್ ಜನರಲ್ ಅಲಿ ಮೊಹಮ್ಮದ್ ನೈನಿ ಮಂಗಳವಾರ […]

ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿ: ಇರಾನ್ ನ 36 ಶಾಲಾ ವಿದ್ಯಾರ್ಥಿನಿಯರ ಸಾವು!

ಟೆಹ್ರಾನ್: ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ ನ 36 ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದಾರೆ. ಮಿನಾಬ್ ನಗರದಲ್ಲಿ ದಾಳಿ ನಡೆದಾಗ ಈ ಘಟನೆ ನಡೆದಿದೆ ಎಂದು ಇರಾನ್ ಸರ್ಕಾರದ ನ್ಯೂಸ್ ಏಜೆನ್ಸಿ IRNA ವರದಿ ಮಾಡಿದೆ. ಬಾಂಬ್ ದಾಳಿಯ ಸಮಯದಲ್ಲಿ ಶಾಲೆಯ ಮೇಲೆ ದಾಳಿ ನಡೆಸಲಾಗಿದ್ದು, ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಇರಾನಿನ ಮಾಧ್ಯಮಗಳು ತಿಳಿಸಿವೆ.  ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿ ವೇಳೆ ಇರಾನ್‌ನಾದ್ಯಂತ ಹಲವಾರು ಸ್ಥಳಗಳನ್ನು ಗುರಿಯಾಗಿಸಿಕೊಂಡಿವೆ. ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರಿಗೆ […]

Vision care opticals ullal ಸಂಸ್ಥೆ ವತಿಯಿಂದ ಬೆಳಿಗ್ಗೆ 10ಗಂಟೆ ವತಿಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಉಚಿತ ಕಣ್ಣು ಪರೀಕ್ಷೆ,

ಅನುಭವ ಪರಿಮಿತಿ ನಂಬಿಕೆ. ಶಾಂತ. ಶುದ್ಧ ವಾತಾವರಣದಲ್ಲಿ ಸಂಪೂರ್ಣ ಕಣ್ಣು ಪರೀಕ್ಷೆ. ಲಿಮಿಟೆಡ್ ಪಿರಿಯಡ್ ಆಫರ್ 50% ರಿಯಾಯಿತಿ ಪ್ರೇಮ್ಗಳ📍📍 ಮೇಲೆ 📍📍📍📍📍 👓ViSion care optical & clinic 👁️ಕಣ್ಣು ಚಿಕಿತ್ಸಾ ಕೇಂದ್ರ,ಅಬ್ಬಕ್ಕ ಸರ್ಕಲ್ ಉಳ್ಳಾಲ್ 575020 🤵ಡಾಕ್ಟರ್ ಮಹಮ್ಮದ್ ನಜೀಬ್ ನಾಝೀಮ💐💐MBBS, MS, FVRSರೆಟಿನಾ ತಜ್ಞರು( ಸಂಪೂರ್ಣ ಕಣ್ಣು ಪರೀಕ್ಷೆ ರೆಟಿನಾ ಪರಿಶೀಲನೆ ಆಧುನಿಕ ಪರೀಕ್ಷಾ ಸೌಲಭ್ಯ ಗುಣಮಟ್ಟದ ಚಶ್ಮಾ ಮತ್ತು ಫ್ರೆಮ್ ಗಳು) 👳‍♂️ಶ್ರೀ ಕಣ್ಣನ್ ಸಿ (ಸೀನಿಯರ್ ರಿಫ್ರಾಕ್ವಿಸ್ಟ್ 30 ವರ್ಷಗಳ […]

ಮನರೇಗಾ ಬಚಾವೋ ಹೋರಾಟ: ಕೇಂದ್ರದ ವಿರುದ್ಧ ಕಾಂಗ್ರೆಸ್ – ಎನ್‌ಎಸ್‌ಯುಐ ಒಗ್ಗಟ್ಟಿನ ಧ್ವನಿ

ಮಹಾತ್ಮ ಗಾಂಧೀಜಿಯವರ ಸ್ಮರಣಾರ್ಥವಾಗಿ ಆಯೋಜಿಸಲಾದ ಈ ಮಹತ್ವದ ಕಾರ್ಯಕ್ರಮ ಹಾಗೂ “ಮನರೇಗಾ ಬಚಾವೋ” ಹೋರಾಟದಲ್ಲಿ, ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ, ಮಂಗಳೂರು ವಿಧಾನಸಭಾ ಕ್ಷೇತ್ರದ ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ NSUI ಉಳ್ಳಾಲ ವಿಧಾನಸಭಾ ಘಟಕವು ಸಕ್ರಿಯವಾಗಿ ಭಾಗವಹಿಸಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

error: Content is protected !!
Don`t copy text! This Content is Protected