ಕೋಝಿಕ್ಕೋಡ್: ಬಸ್‌ನಲ್ಲಿ ಲೈಂಗಿಕ ದೌರ್ಜನ್ಯ ಆರೋಪದ ವಿಡಿಯೋ ವೈರಲ್; ಮನನೊಂದು ವ್ಯಕ್ತಿ ಆತ್ಮಹತ್ಯೆ, ಯುವತಿ ವಿರುದ್ಧ ಸಾರ್ವಜನಿಕರ ಆಕ್ರೋಶ

ಕೋಝಿಕ್ಕೋಡ್: ತುಂಬಾ ರಶ್ ಬಸ್ ನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ವಿಡಿಯೋ ಮಾಡಿ ವೈರಲ್ ಮಾಡಿದ್ದು, ಇದೀಗ ವಿಡಿಯೋದಲ್ಲಿದ್ದ ಯುವಕ ಅವಮಾನ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಈ ಘಟನೆ ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. Shimjitha Musthafa accused Deepak U of touching her inappropriately. The video went viral. Look at her face. Does she seem uncomfortable? No proof […]

60 ಕಿ.ಮೀ ಅಂತರದ ನಿಯಮ ಉಲ್ಲಂಘನೆ: ಕುಂಬ್ಳೆ ಟೋಲ್ಗೇಟ್ ವಿರುದ್ಧ ಫಾರೂಕ್ ಉಳ್ಳಾಲ್ ಕಿಡಿ

ಕುಂಬ್ಳೆ ಟೋಲ್ಗೇಟ್ ಅವೈಜ್ಞಾನಿಕ.: ಫಾರೂಕ್ ಉಳ್ಳಾಲ್ಮಂಗಳೂರು:ಕೇರಳ ಗಡಿ ಪ್ರದೇಶವಾದ ತಲಪಾಡಿಯಲ್ಲಿರುವ ‘ಟೋಲ್ಗೇಟ್’ ನಿಂದ ಕೇವಲ ಇಪ್ಪತ್ತೊಂದು ಕಿ.ಮೀ ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸ್ಥಾಪಿಸಿರುವ ‘ಕುಂಬ್ಳೆ ಟೋಲ್ ಗೇಟ್’ ಅವೈಜ್ಞಾನಿಕ ಮತ್ತು ಉದ್ಧಟತನದ ಪರಮಾವಧಿ ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಸಂಯೋಜಕ ಫಾರೂಕ್ ಉಳ್ಳಾಲ್ ಹೇಳಿದರು.ಅವರು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ರವರ ನೇತೃತ್ವದಲ್ಲಿ ‘ಕುಂಬ್ಳೆ ಟೋಲ್ ಗೇಟ್’ ಅನ್ನು ವಿರೋಧಿಸಿ ನಡೆದ ಜನಪರ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.‘ಟೋಲ್ ಗೇಟ್ ‘ ಅನ್ನು ಅರವತ್ತು ಕಿ.ಮೀ.ಅಂತರದಲ್ಲಷ್ಟೇ […]

ಅರಿಕ್ಕಾಡಿ–ತಲಪಾಡಿ ಎರಡು ಟೋಲ್ ಗೇಟ್‌ಗಳು: ಜನವಿರೋಧಿ ವ್ಯವಸ್ಥೆ ವಿರೋಧಿಸಿ ಎ.ಕೆ. ಅಶ್ರಫ್ ಅವರ ಹೋರಾಟಕ್ಕೆ ಕರ್ನಾಟಕದ ಜನತೆ ಬೆಂಬಲ ನೀಡಲಿ

ಅರಿಕ್ಕಾಡಿಯಲ್ಲಿ ಹೊಸ ಟೋಲ್ ಗೇಟ್ ಸ್ಥಾಪನೆಯಾದ ಬಳಿಕ, ಕೇವಲ 22 ಕಿಲೋಮೀಟರ್ ಅಂತರದಲ್ಲೇ ತಲಪಾಡಿಯಲ್ಲಿ ಮತ್ತೊಂದು ಟೋಲ್ ಗೇಟ್ ಮೂಲಕ ವಸೂಲಿ ಮುಂದುವರಿಯುತ್ತಿರುವುದು ಕರ್ನಾಟಕ–ಕೇರಳ ಗಡಿಭಾಗದ ಜನತೆಗೆ ತೀವ್ರ ಆರ್ಥಿಕ ಹೊರೆ ತಂದಿದೆ. ರಾಷ್ಟ್ರೀಯ ಹೆದ್ದಾರಿ ಟೋಲ್ ಶುಲ್ಕ ನಿಯಮಗಳ ಪ್ರಕಾರ ಸಾಮಾನ್ಯವಾಗಿ ಎರಡು ಟೋಲ್ ಗೇಟ್‌ಗಳ ನಡುವೆ ಕನಿಷ್ಠ 60 ಕಿಲೋಮೀಟರ್ ಅಂತರ ಇರಬೇಕೆಂಬ ಮಾರ್ಗಸೂಚಿ ಇದ್ದರೂ, ಈ ನಿಯಮದ ಆತ್ಮಕ್ಕೆ ವಿರುದ್ಧವಾಗಿ ಒಂದೇ ಮಾರ್ಗದಲ್ಲಿ ಎರಡು ಬಾರಿ ಟೋಲ್ ವಸೂಲಿ ನಡೆಯುತ್ತಿರುವುದು ಸ್ಪಷ್ಟವಾಗಿ ಜನವಿರೋಧಿ […]

Iran protests: ಇರಾನ್‌ನಲ್ಲಿ ವ್ಯಾಪಕ ದಂಗೆ, ಹೆಣಗಳ ರಾಶಿಯಿಂದ ತುಂಬಿಹೋದ ಆಸ್ಪತ್ರೆಗಳು

ಟೆಹ್ರಾನ್, ಜ.12:  ಇರಾನ್‌ನಾದ್ಯಂತ (Iran protests) ಸರ್ವಾಧಿಕಾರಿ ಖಮೇನಿ (Seyyed Ali Hosseini Khamenei) ವಿರೋಧಿ ಪ್ರತಿಭಟನೆಗಳು ದೊಡ್ಡ ಪ್ರಮಾಣದಲ್ಲೆ ಬೆಳೆದಿರುವ ಬೆನ್ನಲ್ಲೇ, ಪ್ರತಿಭಟನಾಕಾರರನ್ನು ಸೇನಾ ಪಡೆಗಳು ನಿರ್ದಯವಾಗಿ ಸಾಯಿಸುತ್ತಿವೆ ಎಂಬ ವರದಿಗಳು ಲಭಿಸಿವೆ. ಹೀಗಾಗಿ ಇರಾನ್‌ನಾದ್ಯಂತದ ಆಸ್ಪತ್ರೆಗಳು ಸ್ಥಿತಿ ನಿಭಾಯಿಸಲು ಹೆಣಗಾಡುತ್ತಿವೆ. ಹೆಣಗಳ ರಾಶಿಯಿಂದ ಆಸ್ಪತ್ರೆಗಳು ತುಂಬಿ ಹೋಗುತ್ತಿವೆ ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ. ಇರಾನ್‌ ಸರ್ಕಾರ ಜನರ ಸಾವಿನ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಮಾನವ ಹಕ್ಕು ಸಂಸ್ಥೆಯೊಂದರ ಪ್ರಕಾರ 116 ಜನ 14 ದಿನಗಳ ಹಿಂಸೆಯಲ್ಲಿ […]

Breaking: ಮುಂದಿನ ಮುಖ್ಯಮಂತ್ರಿಯಾಗಿ ಯು.ಟಿ. ಖಾದರ್? ಹೈಕಮಾಂಡ್‌ನಿಂದ ದೀರ್ಘಕಾಲೀನ ಚಿಂತನೆ!

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಗಿ ಸ್ವಲ್ಪ ಕಾಲಾವಧಿಗೆ ಒಂದುವರೆ ವರ್ಷಕ್ಕೆ ಸನ್ಮಾನ್ಯ ಹಾಜಿ ಯು.ಟಿ ಅಬ್ದುಲ್ ಖಾದರ್ ಅವರು ನೇಮಕ ಆಗುವ ಹೈಕಮಾಂಡ್ ಚಿಂತನೆ ಜಾತಿತ ನಿಲುವಿನ ಆಧಾರದ ಮೇಲೆ ಸನ್ಮಾನ್ಯ ಯು ಟಿ ಖಾದರ್ ರವರನ್ನು ಮುಂದಿನ ಮುಖ್ಯಮಂತ್ರಿ ಆಗಿ ಆಯ್ಕೆ ಮಾಡುವ ದೀರ್ಘಗಾಲಿನ ಚಿಂತನೆಯಲ್ಲಿ ಹೈಕಮಾಂಡ್ ಹೊರ ಬರಬಹುದು ಆದಷ್ಟು ಬೇಗ ಪತ್ರಿಕೆ ಹೇಳಿಕೆ ಬರಬಹುದೆಂದು??

ಚಿತ್ರದುರ್ಗದಲ್ಲಿ ಹೊತ್ತಿ ಉರಿದ ಖಾಸಗಿ ಬಸ್: 11ಕ್ಕೂ ಹೆಚ್ಚು ಮಂದಿ ಸಜೀವ ದಹನ; ಹಲವರಿಗೆ ಗಂಭೀರ ಗಾಯ, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಸಾಧ್ಯತೆ

ಚಿತ್ರದುರ್ಗ: ಖಾಸಗಿ ಟ್ರಾವೆಲ್ ಬಸ್‌ಗೆ ಕಂಟೇನರ್​​ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು, 11ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಹಿರಿಯೂರಿನ ಜವನಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ. ಖಾಸಗಿ ಸ್ಲೀಪರ್ ಕೋಚ್ ಬಸ್​ ಬೆಂಗಳೂರಿನಿಂದ ಶಿವಮೊಗ್ಗದ ಮೂಲಕ ಗೋಕರ್ಣಕ್ಕೆ ಹೊರಟಿತ್ತು. ಈ ನಡುವೆ ಚಿತ್ರದುರ್ಗದ ಹಿರಿಯೂರಿನ ಜವನಗೊಂಡನಹಳ್ಳಿ ಎಂಬಲ್ಲಿ ದುರ್ಘಟನೆ ಸಂಭವಿಸಿದೆ. ಡಿಕ್ಕಿ ಬಳಿಕ ಕಂಟೇನರ್ ಲಾರಿ ಹಾಗೂ ಬಸ್​ ಎರಡೂ ಬೆಂಕಿ ಹೊತ್ತಿಕೊಂಡಿದ್ದು, ಬಸ್ ಸಂಪೂರ್ಣವಾಗಿ […]

ಇಂದು ಉಳ್ಳಾಲ ಕ್ಷೇತ್ರದ ಹಲವು ಪ್ರದೇಶಗಳಲ್ಲಿ ತುರ್ತು ಕಾಮಗಾರಿಯಿಂದ ವಿದ್ಯುತ್ ವ್ಯತ್ಯಯ

ಉಳ್ಳಾಲ ಪ್ರದೇಶದಲ್ಲಿ ಇವತ್ತು ಕರೆಂಟ್ ಇಲ್ಲ ತಲಪಾಡಿ ದೇರ್ಲಕಟ್ಟೆ ಕೋಟೆಪುರ ಮೇಲಂಗಡಿ ಕಲಾಪು, ಎಲ್ಲಾ ಪ್ರದೇಶ ಇವತ್ತು ಕರೆಂಟ್ ಆಡಚಣೆ ತುರ್ತು ಕೆಲಸದ ನಿಮಿತ್ತ ಕೋಟಕಾರ್ ಎಲ್ಲಾ ಕಡೆಯಲ್ಲಿ ಉಲ್ಲಾಳ ಕ್ಷೇತ್ರ ದಲ್ಲಿ

ಮಂಗಳೂರು ಮೂಲದ ರೌಡಿಶೀಟರ್ ತುಕ್ಕ ನೌಫಲ್ ಬರ್ಬರ ಹತ್ಯೆ

ಉಪ್ಪಳ: ಉಪ್ಪಳದಲ್ಲಿ ಮಂಗಳೂರು ಮೂಲದ ತುಕ್ಕ ನೌಫಲ್ ಎಂಬಾತನನ್ನು ಬರ್ಬರ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ನೌಫಲ್ ಮಂಗಳೂರಿನ ಫೈಝಲ್ ನಗರ ನಿವಾಸಿಯಾಗಿದ್ದು, ಉಪ್ಪಳ ರೈಲ್ವೆ ಗೇಟ್ ಬಳಿ ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆತನ ಮೃತದೇಹ ಕಾಸರಗೋಡಿನ ಆಸ್ಪತ್ರೆಯಲ್ಲಿ ಇದೆ ಎಂದು ವರದಿಯಾಗಿದೆ. ಘಟನೆ ಬಗ್ಗೆ ಇನ್ನಷ್ಟು ಮಾಹಿತಿ ಬರಬೇಕಿದೆ.

ಆರ್ಭಟಿಸಲಿರೋ ‘ಮೋಂತಾ’ ಸೈಕ್ಲೋನ್.. ಅಕ್ಟೋಬರ್ 29ರವರೆಗೆ ಧಾರಾಕಾರ ಮಳೆ, ಗಾಳಿ

ಹೋದೆಯಾ ಗವಾಕ್ಷಿ ಅಂದ್ರೆ ಬಂದೆ ಮೀನಾಕ್ಷಿ ಅನ್ನೋ ಹಾಗೆ ಮಳೆರಾಯನ ಕಾಟ ಮುಗೀತು ಅನ್ನೋ ಹೊತ್ತಿಗೆ ಚಂಡಮಾರುತದ ಭೀತಿ ಎದುರಾಗಿದೆ. ಮೋಂತಾ ಎಂಬ ಹೆಸರಿನಿಂದ ಲಗ್ಗೆ ಇಡಲು ಸಜ್ಜಾಗಿರೋ ಚಂಡಮಾರುತವೊಂದು ಮೂರು ರಾಜ್ಯಗಳಿಗೆ ತೂಗುಗತ್ತಿಯಾಗಿದೆ ವರುಣನ ಆರ್ಭಟದಿಂದ ತತ್ತರಿಸಿದ್ದ ಜನರಿಗೆ ಸದ್ಯ ಮತ್ತೊಂದು ಆಘಾತ ಎದುರಾಗಿದೆ. ಮಳೆ ಮುಗೀತು ಅಂತ ನಿಟ್ಟುಸಿರು ಬಿಟ್ಟ ಅನ್ನದಾತರಿಗೆ ಬಂಗಾಳಕೊಲ್ಲಿಯಿಂದ ಕಹಿ ಸುದ್ದಿಯೊಂದು ಬಂದಿದೆ. ಮತ್ತೆ ರೈತರ ಬದುಕು ಮುರಾಬಟ್ಟೆಯಾಗೋ ಸೂಚನೆ ಸಿಕ್ಕಿದೆ. ಭಾರತದ ಪೂರ್ವ ಕರವಾಳಿ ಭಾಗಕ್ಕೆ ನಾಳೆ ಮೋಂತಾ […]

error: Content is protected !!
Don`t copy text! This Content is Protected