ಅಖಿಲ ಭಾರತ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ನ (AIMPLB) ಉನ್ನತ ಮಟ್ಟದ ನಿಯೋಗವು ಕೇಂದ್ರ ಅಲ್ಪಸಂಖ್ಯಾತ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿಯಾಗಿ, ವಕ್ಫ್ ಆಸ್ತಿಗಳನ್ನು ಉಮೀದ್ ಪೋರ್ಟಲ್ಗೆ ಅಪ್ಲೋಡ್ ಮಾಡುವಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿದರು. ತಾಂತ್ರಿಕ ದೋಷಗಳು ಹಾಗೂ ಅತ್ಯಂತ ಕಡಿಮೆ ಸಮಯದ ಗಡುವನ್ನುವನ್ನು ಕೊಟ್ಟಿರುವುದರಿಂದ ಬಹಳಷ್ಟು ಆಸ್ತಿಗಳು ಅಪ್ಲೋಡ್ ಮಾಡಲು ಬಾಕಿ ಇದ್ದು ಮುಂದಿನ ಒಂದು ವರ್ಷದವರೆಗೆ ದಿನಾಂಕವನ್ನು ವಿಸ್ತರಿಸಲು ಆಗ್ರಹಿಸಲಾಯಿತು. ಈ ವಿಷಯವಾಗಿ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಮತ್ತು ಶೀಘ್ರವಾಗಿ ಪರಿಹರಿಸುವ ಭರವಸೆಯನ್ನು ನೀಡಿದರು.
ಈ ನಿಯೋಗದಲ್ಲಿ AIMPLB ಉಪಾಧ್ಯಕ್ಷ ಸೈಯದ್ ಸಾದತುಲ್ಲಾ ಹುಸೈನಿ, ಪ್ರಧಾನ ಕಾರ್ಯದರ್ಶಿ ಮೌಲಾನಾ ಮಹಮ್ಮದ್ ಫಝಲುರ್ ರಹೀಂ ಮುಜದ್ದಿದಿ, ಸಂಸದ ಬ್ಯಾರಿಸ್ಟರ್ ಅಸದುದ್ದೀನ್ ಒವೈಸಿ, ಸಂಸದ ರುಹುಲ್ಲಾ ಮೆಹದಿ, ರಾಜ್ಯಸಭಾ ಸದಸ್ಯ ಮಹಮ್ಮದ್ ಜಾವೇದ್, ಮೊಹಮ್ಮದ್ ಅದೀಬ್, ಮೌಲಾನಾ ಮಹಮ್ಮದ್ ಹಕೀಮುದ್ದೀನ್ ಕಾಸ್ಮಿ, ಮುಫ್ತಿ ಅಬ್ದುಲ್ ರಜಾಕ್, ವಕೀಲರಾದ ಫಝೀಲ್ ಅಹ್ಮದ್ ಅಯೂಬಿ, ವಕೀಲರಾದ ಹಕೀಮ್ ಮೊಹಮ್ಮದ್ ತಾಹಿರ್ ಹಾಗೂ ಅಡ್ವೊಕೇಟ್ ನಬೀಲಾ ಜಮೀಲ್ ಉಪಸ್ಥಿತರಿದ್ದರು.













