Image

ಆರ್ಭಟಿಸಲಿರೋ ‘ಮೋಂತಾ’ ಸೈಕ್ಲೋನ್.. ಅಕ್ಟೋಬರ್ 29ರವರೆಗೆ ಧಾರಾಕಾರ ಮಳೆ, ಗಾಳಿ

ಹೋದೆಯಾ ಗವಾಕ್ಷಿ ಅಂದ್ರೆ ಬಂದೆ ಮೀನಾಕ್ಷಿ ಅನ್ನೋ ಹಾಗೆ ಮಳೆರಾಯನ ಕಾಟ ಮುಗೀತು ಅನ್ನೋ ಹೊತ್ತಿಗೆ ಚಂಡಮಾರುತದ ಭೀತಿ ಎದುರಾಗಿದೆ. ಮೋಂತಾ ಎಂಬ ಹೆಸರಿನಿಂದ ಲಗ್ಗೆ ಇಡಲು ಸಜ್ಜಾಗಿರೋ ಚಂಡಮಾರುತವೊಂದು ಮೂರು ರಾಜ್ಯಗಳಿಗೆ ತೂಗುಗತ್ತಿಯಾಗಿದೆ

ವರುಣನ ಆರ್ಭಟದಿಂದ ತತ್ತರಿಸಿದ್ದ ಜನರಿಗೆ ಸದ್ಯ ಮತ್ತೊಂದು ಆಘಾತ ಎದುರಾಗಿದೆ. ಮಳೆ ಮುಗೀತು ಅಂತ ನಿಟ್ಟುಸಿರು ಬಿಟ್ಟ ಅನ್ನದಾತರಿಗೆ ಬಂಗಾಳಕೊಲ್ಲಿಯಿಂದ ಕಹಿ ಸುದ್ದಿಯೊಂದು ಬಂದಿದೆ. ಮತ್ತೆ ರೈತರ ಬದುಕು ಮುರಾಬಟ್ಟೆಯಾಗೋ ಸೂಚನೆ ಸಿಕ್ಕಿದೆ.

Montha_Cyclone_1

ಭಾರತದ ಪೂರ್ವ ಕರವಾಳಿ ಭಾಗಕ್ಕೆ ನಾಳೆ ಮೋಂತಾ ಲಗ್ಗೆ!

ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಮೋಂತಾ ಚಂಡಮಾರುತವು ಭಾರತದ ಪೂರ್ವ ಕರಾವಳಿಯತ್ತ ಲಗ್ಗೆ ಇಡಲು ಸಜ್ಜಾಗಿದೆ. ಭಾರತೀಯ ಹವಮಾನ ಇಲಾಖೆ ಪ್ರಕಾರ, ನಾಳೆ ಮಚಲಿಪಟ್ಟಣಂ ಮತ್ತು ಕಳಿಂಗಪಟ್ಟಣಂ ನಡುವೆ ಕಾಕಿನಾಡ ಬಾಳಿ ಭೂಮಿಗೆ ಅಪ್ಪಳಿಸುವ ನಿರೀಕ್ಷೆ ಇದೆ.

‘ಮೋಂತಾ’ ಭೀತಿ!

  • ಗಂಟೆಗೆ 90-100 ಕಿ.ಮೀ ವೇಗದಲ್ಲಿ ಮೋಂತಾ ಚಂಡಮಾರುತ ಎಂಟ್ರಿ
  • ಇಂದಿನಿಂದ ಅಕ್ಟೋಬರ್ 29ರವರೆಗೂ ಭಾರೀ ಮಳೆ ಸಾಧ್ಯತೆ ಇದೆ
  • ‘ಮೋಂತಾ’ ಅಕ್ಟೋಬರ್​ 28ರಂದು ಕರಾವಳಿಯ ದಾಟುವ ಸಂಭವ
  • ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮೋಂತಾ ಉಗಮ
  • ಇಂದಿನಿಂದ ಅಕ್ಟೋಬರ್​ 29ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆ
  • ಕರ್ನಾಟಕದ ಮೇಲೂ ಪರಿಣಾಮ, ಭಾರೀ ಮಳೆಯಾಗೋ ಸಾಧ್ಯತೆ 
  • ಭೂಕುಸಿತ, ಪ್ರವಾಹ & ಇತರ ವಿಪತ್ತುಗಳಿಗೆ ಕಾರಣವಾಗುವ ಸಾಧ್ಯತೆ
Montha_Cyclone

ಆಂಧ್ರ, ಒಡಿಶಾ ಮತ್ತು ತಮಿಳುನಾಡಿನಲ್ಲಿ ಹೈ ಅಲರ್ಟ್​

ಮೋಂತಾ ಚಂಡಮಾರುತವನ್ನ ಎದುರಿಸಲು ಆಂಧ್ರ, ಒಡಿಶಾ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಾದ ಕಾಕಿನಾಡ, ಮಚಲಿಪಟ್ಟಣಂ ಮತ್ತು ಕಳಿಂಗಪಟ್ಟಣಂನಲ್ಲಿ ಚಂಡಮಾರುತದ ಪರಿಣಾಮವು ತೀವ್ರವಾಗಿರಲಿದೆ. ಈ ಹಿನ್ನೆಲೆ ಆಂಧ್ರಪ್ರದೇಶದ ವಿಪತ್ತು ನಿರ್ವಹಣಾ ತಂಡಗಳನ್ನು ಸಂಪೂರ್ಣ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಇಂದಿನಿಂದ ರಾಯಲಸೀಮಾದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಕೃಷಿಕರು ಮತ್ತು ಮೀನುಗಾರರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಕೆ ನೀಡಲಾಗಿದೆ. ಒಡಿಶಾ ರಾಜ್ಯದ ಒಂಬತ್ತು ಜಿಲ್ಲೆಗಳಿಗೆ ಯೆಲ್ಲೋ ವಾರ್ನಿಂಗ್ ಜಾರಿಯಲ್ಲಿದೆ. ಒಡಿಶಾದ 30 ಜಿಲ್ಲೆಗಳ ಪೈಕಿ 16 ಜಿಲ್ಲೆಗಳು ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕೋ ಸಾಧ್ಯತೆ ಇದೆ. ಕೋರಾಪುಟ್, ಗಂಜಾಂ, ಮತ್ತು ಬಾಲಸೋರ್‌ನಂತಹ ಸೂಕ್ಷ್ಮ ಜಿಲ್ಲೆಗಳಲ್ಲಿ ಸರ್ಕಾರಿ ನೌಕರರ ರಜೆಗಳನ್ನು ರದ್ದುಗೊಳಿಸಲಾಗಿದೆ. ತಮಿಳುನಾಡಿನಲ್ಲೂ ಹವಾಮಾನ ಇಲಾಖೆಯು ಕರಾವಳಿಯ ಜನರಿಗೆ ಸುರಕ್ಷಿತ ಸ್ಥಳಗಳಲ್ಲಿ ಉಳಿಯುವಂತೆ ಸೂಚನೆ ನೀಡಿದ್ದು, ಮೀನುಗಾರರಿಗೆ ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.

ಹೋದ್ಯ ಗವಾಕ್ಷಿ ಅಂದ್ರೆ ಬಂದೆ ಮೀನಾಕ್ಷಿ ಅನ್ನೋ ಹಾಗೆ ಮಳೆರಾಯನ ಕಾಟ ಮುಗೀತು ಅನ್ನೋ ಹೊತ್ತಿಗೆ ಚಂಡಮಾರುತದ ಭೀತಿ ಎದುರಾಗಿದೆ..  ಮೋಂತಾ ಚಂಡಮಾರುತದಿಂದ ಜನರಿಗೆ, ಅನ್ನದಾತರಿಗೆ ಅದೇನೇನ್ ಸಂಕಷ್ಟ ಕಾದಿದ್ಯೋ ಆ ದೇವರೇ ಬಲ್ಲ.

Releated Posts

ಸಹೃದಯಿ ಸಮಾಜಸೇವಕ ಬಿ.ಎ. ಮೊಯ್ದಿನ್ ಬಾವಾ ವಿಧಾನಸಭೆ ಪ್ರವೇಶಿಸಬೇಕೆಂಬ ಜನಮನದ ಆಶಯ

ಬಿ.ಎ.ಮೊಯ್ದಿನ್ ಬಾವಾ ಎಂಬ ಸಹೃದಯಿ ನಾಯಕ ಈಗ ಇಡೀ ರಾಜ್ಯಾದ್ಯಂತ ತಮ್ಮದೇ ಆದ ಅಭಿಮಾನಿ ವರ್ಗವನ್ನು ಹೊಂದಿದ್ದಾರೆ. ಇದಕ್ಕೆ ಕಾರಣ ಅವರ ಸಹೃದಯಿ ಮನಸ್ಸು…

ByByshanmedianewsDec 23, 2025

ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ : ಘಟಾನುಘಟಿ ನಾಯಕರುಗಳ ಭವಿಷ್ಯ ಡಿಸೇಂಬರ್ 24 ಕ್ಕೆ ನಿರ್ಧಾರ

ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ : ಘಟಾನುಘಟಿ ನಾಯಕರುಗಳ ಭವಿಷ್ಯ ಡಿಸೇಂಬರ್ 24 ಕ್ಕೆ ನಿರ್ಧಾರ ಇತ್ತೀಚೆಗೆ ಮೇಲ್ದರ್ಜೆ ಗೆರಲ್ಪಟ್ಟ ಬಜ್ಪೆ ಪಟ್ಟಣ ಪಂಚಾಯತ್,…

ByByshanmedianewsDec 22, 2025

ಸಮಾಜಸೇವೆಯ ಸಾರ್ಥಕ ಪ್ರತೀಕ ಡಾ. ಅಲ್ ಹಾಜ್ ಯು.ಟಿ ಇಫ್ತಿಕಾರ್ ಅಲಿ ಫರೀದ್ – ಶಿಕ್ಷಣ, ವೈದ್ಯಕೀಯ ಹಾಗೂ ಮಾನವೀಯ ಸೇವೆಯಲ್ಲಿ ಅಪೂರ್ವ ಕೊಡುಗೆ

ಡಾ! ಅಲ್ ಹಾಜ್ ಯು.ಟಿ ಇಫ್ತಿಕಾರ್ ಅಲಿ ಫರೀದ್. ಈ ಹೆಸರನ್ನು ಕೇಳದವರು ಯಾರೂ ಇಲ್ಲ. ಕರ್ನಾಟಕ ರಾಜ್ಯದ ಅತ್ಯಂತ ಪ್ರಭಾವಿ ಶಾಸಕರಾಗಿದ್ದ ದಿವಂಗತ…

ByByshanmedianewsDec 22, 2025

ಉಮೀದ್ ಪೋರ್ಟಲ್ ಸಮಸ್ಯೆ: ವಕ್ಫ್ ಆಸ್ತಿ ಅಪ್ಲೋಡ್ ಗಡುವು ವಿಸ್ತರಣೆಗಾಗಿ AIMPLB ನಿಯೋಗದಿಂದ ಕೇಂದ್ರ ಸಚಿವರಿಗೆ ಮನವಿ

ಅಖಿಲ ಭಾರತ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌ನ (AIMPLB) ಉನ್ನತ ಮಟ್ಟದ ನಿಯೋಗವು ಕೇಂದ್ರ ಅಲ್ಪಸಂಖ್ಯಾತ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿಯಾಗಿ, ವಕ್ಫ್…

ByByshanmedianewsDec 12, 2025

Scroll to Top