ಕ್ರಿಕೆಟ್ ಒಂದು ಕ್ರಿಯಾತ್ಮಕ ಕ್ರೀಡೆಯಾಗಿದ್ದು, ಬದಲಾಗುತ್ತಿರುವ ಸನ್ನಿವೇಶಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವು ನಿರ್ಣಾಯಕವಾಗಿದೆ. ಆಟಗಾರರು ಹೊಂದಿಕೊಳ್ಳುವಂತೆ ಪ್ರೋತ್ಸಾಹಿಸಿ ಮತ್ತು ಆಟದ ಬೇಡಿಕೆಗಳಿಗೆ ಅನುಗುಣವಾಗಿ ಅವರ ತಂತ್ರಗಳನ್ನು ರೂಪಿಸುವ ನಿಟ್ಟಿನಲ್ಲಿ ತಂಡದ ಸಮಿತಿಸದಸ್ಯರು,ಹಿತೈಷಿಗಳು, ಕ್ರೀಡಾಭಿಮಾನಿಗಳನ್ನೊಳಗೊಂಡ ಸಮಾಲೋಚನಾ ಸಭೆಯು ಟೆಸ್ಟ್ ಸ್ಪೋಟ್ಸ್ ತಂಡದ ಅಧ್ಯಕ್ಷರಾದ ಜನಾಬ್ ಅಬ್ದುಲ್ ರಹಿಮಾನ್ ಹಳೇಕೋಟೆ ರವರ ಅಧ್ಯಕ್ಷತೆಯಲ್ಲಿ ಇಂದು ತೊಕ್ಕೊಟ್ಟುವಿನ ಹೊಟೇಲ್ ರತ್ನಂ ನಲ್ಲಿ ನಡೆಯಿತು
ಸಭೆಯಲ್ಲಿ ಉಪಾದ್ಯಕ್ಷರಾದ ಕೌoಸಿಲರ್ ಅಬ್ದುಲ್ ರವೂಫ್,ಪ.ಕಾರ್ಯದರ್ಶಿ ಯುನೂಸ್ ಹಾಗೂ ತಂಡದ ಮಾಜಿ ಕ್ರಿಡಾಪಟು ಇಕ್ಬಾಲ್, ರಿಯಾಜ್ ಹಾಜಿ ಪಿಪಿ. ಅಬ್ಬಾಸ್ ಕೊಮರಂಗಲ,ಸಮೀರ್ ಹಳೆಕೋಟೆ, ಅಶ್ಫಾಕ್ ಹಮೀದ್, ಅಹಮದ್ ಬಾವ ಹಾಗೂ ಸುಮಾರು 30 ಸದಸ್ಯರುಗಳ ಉಪಸ್ಥಿತಿಯಲ್ಲಿ ತಂಡದ ಮುಂದಿನ ರೂಪುರೇಶೆಗಳ ಬಗ್ಗೆ ಸುದೀರ್ಘವಾದ ಚರ್ಚೆ ನಡೆಸಿ . ತಂಡದ ಅನುಕೂಲಕ್ಕಾಗಿ ಬಹಳಷ್ಟು ವಿಚಾರಗಳನ್ನು ಕೈಗೊಳ್ಳುವಂತೆ ತೀರ್ಮಾನಿಸಲಾಯಿತು, ಈ ಸಭೆಯನ್ನು ಸಫ್ವಾನ್ ಹಳೆಕೋಟೆ ನಿರೂಪಿಸಿ ಕೊನೆಗೆ ತಂಡದ ನಾಯಕ ಮುಝಮ್ಮಿಲ್ ರವರು ವಂದಿಸಿದರು.














