ಜನಪ್ರತಿನಿಧಿ ಎಂಬ ಜವಾಬ್ದಾರಿ ಜನಸೇವೆಯೆ ಹೊರತು ದುಡ್ಡು ಮಾಡುವ ಹುದ್ದೆ ಅಲ್ಲ ಎಂದು ತೋರಿಸಿ ಕೊಟ್ಟು ಮಾದರಿಯಾದ ಉಳ್ಳಾಲ ನಗರ ಸಭೆ ಮಾಜಿ ಅಧ್ಯಕ್ಷರೂ, ಹಾಲಿ ಸದಸ್ಯ ಮಹಮ್ಮದ್ ಮುಕ್ಕಚೇರಿ ಇವರ ಸಮಾಜ ಸೇವೆಯನ್ನು ಗುರುತಿಸಿ 25-26 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಗಾಗಿ ಇವರನ್ನು ಆಯ್ಕೆ ಮಾಡಲಾಗಿದೆ.
ಉಳ್ಳಾಲದ ಅಂದಿನ ಗ್ರಾಮ ಪಂಚಾಯಿತಿ – ಪಟ್ಟಣ ಪಂಚಾಯಿತಿ, ಪುರಸಭೆ,ಪ್ರಸ್ತುತ ನಗರ ಸಭೆಗೆ ಹೀಗೆ ಸತತವಾಗಿ ಒಟ್ಟು 6 ಬಾರಿ ಆಯ್ಕೆಯಾದ ಏಕೈಕ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮೊಹಮ್ಮದ್ ಮುಕ್ಕಚೇರಿ ಸ್ಥಳಿಯ ಸಂಸ್ಥೆಗೆ ಖಾಲಿ ಕೈಯಲ್ಲಿ ಬಂದು ಇಲ್ಲಿ ಯಾವುದೇ ಅಡ್ಡ ಕಮಾಯಿ ಮಾಡದೇ ಜನ ಸೇವೆ ಮಾಡಿ ಖಾಲಿ ಕೈಯಲ್ಲಿಯೆ ನಿರ್ಗಮಿಸಿ ಕ್ಲೀನ್ ಇಮೇಜ್ ಉಳಿಸಿ ಕೊಂಡು ಜನರ ಒಲವು ಗಳಿಸಿ ಕೊಂಡು ಉಳ್ಳಾಲದಂತಹ ಪ್ರದೇಶದಲ್ಲಿ ಸತತ 6 ಬಾರಿ ಆಯ್ಕೆ ಯಾಗಿದ್ದಾರೆ
ವಿದ್ಯಾವಂತ, ನಿಖರ ಭಾಷಣಕಾರ,ಲೇಖಕ, ಕವನಗಳ ಮೂಲಕ ಸಮಸ್ಯೆಗಳನ್ನು ಚೆನ್ನಾಗಿ ಮನವರಿಕೆ ಮಾಡುವ0ತಹ ನೈಪುಣ್ಯತೆ,ಸಭೆಯಲ್ಲಿ ಅದ್ಬುತವಾಗಿ ವಿಷಯಯ ಮಂಡನೆ ಮಾಡುವ ಪ್ರತಿಭಾವಂತ, ನಿಸ್ವಾರ್ಥ ಸಮಾಜ ಸೇವಕ ಹೀಗೆ ಬಹುಮುಖ ಪ್ರತಿಭೆಯ ಮಹಮ್ಮದ್ ಮುಕ್ಕಚೇರಿ ಅವರಿಗೆ ಉಳ್ಳಾಲ ನಗರ ಸಭೆಯ ಜನಪ್ರತಿನಿಧಿಗಳ ಆಡಳಿತ ಅವಧಿ ಮುಕ್ತಾಯದ ಸಂದರ್ಭದಲ್ಲಿಯೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ವಿಶೇಷ.
ಅರ್ಹತೆ ಅಧಾರದಲ್ಲಿ ಜಿಲ್ಲಾ ರಾಜ್ಯೋತ್ಸವ(ಸಮಾಜ ಸೇವೆ) ಪ್ರಶಸ್ತಿಗೆ ಆಯ್ಕೆಯಾದ ಮಹಮ್ಮದ್ ಮುಕ್ಕಚೇರಿ ಅವರಿಗೆ ಹೃದಯಸ್ಪರ್ಶಿ ಅಭಿನಂದನೆಗಳು














