ಟೆಸ್ಟ್ ಸ್ಪೋಟ್ಸ್ & ಕಲ್ಚರಲ್ ಅಸೋಸಿಯೇಷನ್ ಹಳೆಕೋಟೆ ಉಳ್ಳಾಲ
ಹಳೆಕೋಟೆ ಟೆಸ್ಟ್ ಸ್ಪೋಟ್ಸ್ ತಂಡದ 2025 -26 ನೇ ಸಾಲಿನ ನೂತನ ಸಮವಸ್ತ್ರ ಬಿಡುಗಡೆ ಕಾರ್ಯಕ್ರಮವನ್ನು
ಉಳ್ಳಾಲ ಪೆರ್ಮನೂರಿನ ಪ್ರತಿಷ್ಠಿತ ಬ್ಲ್ಯಾಕ್ ಶುಗರ್ ವಾಣಿಜ್ಯ ಸಂಕೀರ್ಣದ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮವು ಟೆಸ್ಟ್ ಸ್ಪೋರ್ಟ್ಸ್ ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಳೆಕೋಟೆ.ಯವರ ಅಧ್ಯಕ್ಷತೆಯಲ್ಲಿ ಬಹಳಷ್ಟು ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಉಳ್ಳಾಲ ನಗರ ಪಂಚಾಯತಿನ ಮಾಜಿ ಅಧ್ಯಕ್ಷರಾದ ಜನಾಬ್ ಫಾರೂಕ್ UH ಉದ್ಘಾಟಿಸಿದರು. ಮತ್ತು ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆಯಾದ ಶಿವಾಜಿ ಫ್ರೆಂಡ್ಸ್ ಸರ್ಕಲ್ ತೊಕ್ಕೊಟು ಇದರ ಅಧ್ಯಕ್ಷರಾದ ಜನಾಬ್ ಅಲ್ತಾಫ್UH ಹಾಗೂ ಉಳ್ಳಾಲ ಪುರಸಭೆಯ ನಾಮನಿರ್ದೇಶಿತ ಮಾಜಿ ಸದಸ್ಯರಾದ ಶ್ರೀಯುತ ಭಗವಾನ್ ದಾಸ್ ರವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ತಂಡಕ್ಕೆ ಶುಭ ಹಾರೈಸಿದರು.ಅಧ್ಯಕ್ಷ ರಹಿಮಾನ್ ಹಳೇಕೋಟೆ ಮಾತನಾಡಿ ಸಂಘಟನೆ ನಡೆದು ಬಂದ ಹಾದಿಯ ಬಗ್ಗೆ ಮತ್ತು ಮುಂದಿನ ಅವದಿಯಲ್ಲಿ ಬ್ರಹತ್ ರಕ್ತದಾನ ಶಿಬಿರ ಉಚಿತ ವೈದ್ಯಕೀಯ ಶಿಬಿರ ಮತ್ತು ಇನ್ನಿತರ ಹಲವು ಕಾರ್ಯಕ್ರಮಗಳನ್ನು ಮಾಡಲು ಉದ್ದೇಸಿಸಿದ್ದೇವೆ ಎಂದು ಹೇಳಿದರು ಹಾಗೆಯೇ ವೇದಿಕೆಯಲ್ಲಿ ಶಾನ್ ಮೀಡಿಯಾ ಸುದ್ಧಿವಾಹಿನಿಯ ಮಾಲಕರಾದ ಅಲೀ ಮೋನಾಕ NF Construction ಮಾಲಕರಾದ ಇಬ್ರಾಹಿಂ ಉಳ್ಳಾಲ್,ಸಫರ್ ಸ್ಪೋರ್ಟ್ಸ್ ಮಂಚಿಲ ಸಂಸ್ಥೆಯ ಹಿರಿಯ ಸದಸ್ಯರಾದ ಸಲಹೆಗಾರ ಅಶ್ರಫ್ ಮಂಚಿಲ,SRS costruction ಮಾಲಕರಾದ ಆಶಿಕ್ ಉಳ್ಳಾಲ, ಹಳೆಕೋಟೆ ವೆಲ್ಫೇರ್ ಅಸೋಸಿಯೇಷನ್ ಇದರ ಕೋಶಾಧಿಕಾರಿ ರಿಯಾಜ್ ಹಾಜಿ ಪಿಪಿ, ಶೈನಿಂಗ್ ಸ್ಪೋರ್ಟ್ಸ್ ಇದರ ಅಧ್ಯಕ್ಷರಾದ ಜನಾಬ್ ಶಾಫಿ ಮುಲಿಗುಡ್ಡೆ, ಶೈನಿಂಗ್ ಸ್ಪೋರ್ಟ್ಸ್ ತಂಡದ ನಾಯಕರಾದ ಅಹಮದ್ ಶರೀಫ್, Abh construction ಮಾಲಕರು ಅಹಮದ್ ಬಾವ ಸೇರಿದಂತೆ ಎಲ್ಲಾ ಅತಿಥಿ ಗಣ್ಯರ ಸಮ್ಮುಖದಲ್ಲಿ ನೂತನ ಸಮವಸ್ತ್ರವನ್ನು ಬಿಡುಗಡೆಗೊಳಿಸಿ ಕಾರ್ಯಕ್ರಮವನ್ನು ಸಫ್ವಾನ್ ಉಳ್ಳಾಲ್ ನಿರೂಪಿಸಿ ತಂಡದ ನಾಯಕ ಮುಝಮ್ಮಿಲ್ ರವರು ವಂದಿಸಿದರು


















