Image

ಕೆಂಪು ಕೋಟೆ ಬಳಿ ಕಾರು ಸ್ಫೋಟವಾಗಿ 8 ಜನ ಸಾವು; ದೆಹಲಿಯಲ್ಲಿ ಹೈ ಅಲರ್ಟ್

ನವದೆಹಲಿ, ನವೆಂಬರ್ 10: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ಸಂಜೆ ಭಾರೀ ಸ್ಫೋಟ ಉಂಟಾಗಿದೆ. ಕೆಂಪು ಕೋಟೆ (Red Fort) ಬಳಿಯ ಮೆಟ್ರೋ ನಿಲ್ದಾಣದ ಗೇಟ್ ಬಳಿ ನಿಲ್ಲಿಸಿದ್ದ ಕಾರು ಸ್ಫೋಟವಾಗಿದೆ. ಇದರಿಂದ 8 ಜನರು ಮೃತಪಟ್ಟಿದ್ದಾರೆ. ಸುತ್ತಲೂ ಬೆಂಕಿ ಆವರಿಸಿದ್ದರಿಂದ ಹಲವು ಜನರು ಗಾಯಗೊಂಡಿದ್ದಾರೆ. ಇದರಿಂದ ದೆಹಲಿಯಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ.

ದೆಹಲಿಯ ಸಂಸತ್ ಭವನ, ಇಂಡಿಯಾ ಗೇಟ್ ಸುತ್ತ ಹೈ ಅಲರ್ಟ್ ಘೋಷಿಸಲಾಗಿದೆ. ಚಾಂದನಿಚೌಕ್ ಮಾರ್ಕೆಟ್, ಕೆಂಪು ಕೋಟೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳನ್ನು ದೆಹಲಿ ಪೊಲೀಸರು ಬಂದ್ ಮಾಡಿದ್ದಾರೆ

ಇಂದು ಸಂಜೆ 6.55ರ ಸುಮಾರಿಗೆ ಕಾರು ಸ್ಫೋಟವಾಗಿದೆ ಎಂಬ ಮಾಹಿತಿ ಲಭ್ಯವಾಯಿತು. ಇದಾದ ನಂತರ 7 ಅಗ್ನಿಶಾಮಕ ದಳದ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿಯನ್ನು ಶೀಘ್ರದಲ್ಲೇ ನಿಯಂತ್ರಣಕ್ಕೆ ತರಲಾಯಿತು.

ದೆಹಲಿ ಅಗ್ನಿಶಾಮಕ ಇಲಾಖೆಯ ಪ್ರಕಾರ, ನಿಲ್ಲಿಸಿದ್ದ ಕಾರಿನಲ್ಲಿ ಸ್ಫೋಟ ಸಂಭವಿಸಿದೆ ಎಂದು ಕರೆ ಬಂದಿದ್ದು, ನಂತರ ಹತ್ತಿರದ 3ರಿಂದ 4 ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿಯನ್ನು ನಿಯಂತ್ರಿಸಲು ತಕ್ಷಣವೇ ಹಲವಾರು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ

ಅಗ್ನಿಶಾಮಕ ದಳದ ಅಧಿಕಾರಿಗಳು ಸಿಎನ್‌ಜಿ ಸಿಲಿಂಡರ್ ಸ್ಫೋಟದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಸ್ಫೋಟಕ್ಕೆ ನಿಖರವಾದ ಕಾರಣ ಇನ್ನೂ ದೃಢಪಟ್ಟಿಲ್ಲ.

Releated Posts

ಸಹೃದಯಿ ಸಮಾಜಸೇವಕ ಬಿ.ಎ. ಮೊಯ್ದಿನ್ ಬಾವಾ ವಿಧಾನಸಭೆ ಪ್ರವೇಶಿಸಬೇಕೆಂಬ ಜನಮನದ ಆಶಯ

ಬಿ.ಎ.ಮೊಯ್ದಿನ್ ಬಾವಾ ಎಂಬ ಸಹೃದಯಿ ನಾಯಕ ಈಗ ಇಡೀ ರಾಜ್ಯಾದ್ಯಂತ ತಮ್ಮದೇ ಆದ ಅಭಿಮಾನಿ ವರ್ಗವನ್ನು ಹೊಂದಿದ್ದಾರೆ. ಇದಕ್ಕೆ ಕಾರಣ ಅವರ ಸಹೃದಯಿ ಮನಸ್ಸು…

ByByshanmedianewsDec 23, 2025

ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ : ಘಟಾನುಘಟಿ ನಾಯಕರುಗಳ ಭವಿಷ್ಯ ಡಿಸೇಂಬರ್ 24 ಕ್ಕೆ ನಿರ್ಧಾರ

ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ : ಘಟಾನುಘಟಿ ನಾಯಕರುಗಳ ಭವಿಷ್ಯ ಡಿಸೇಂಬರ್ 24 ಕ್ಕೆ ನಿರ್ಧಾರ ಇತ್ತೀಚೆಗೆ ಮೇಲ್ದರ್ಜೆ ಗೆರಲ್ಪಟ್ಟ ಬಜ್ಪೆ ಪಟ್ಟಣ ಪಂಚಾಯತ್,…

ByByshanmedianewsDec 22, 2025

ಸಮಾಜಸೇವೆಯ ಸಾರ್ಥಕ ಪ್ರತೀಕ ಡಾ. ಅಲ್ ಹಾಜ್ ಯು.ಟಿ ಇಫ್ತಿಕಾರ್ ಅಲಿ ಫರೀದ್ – ಶಿಕ್ಷಣ, ವೈದ್ಯಕೀಯ ಹಾಗೂ ಮಾನವೀಯ ಸೇವೆಯಲ್ಲಿ ಅಪೂರ್ವ ಕೊಡುಗೆ

ಡಾ! ಅಲ್ ಹಾಜ್ ಯು.ಟಿ ಇಫ್ತಿಕಾರ್ ಅಲಿ ಫರೀದ್. ಈ ಹೆಸರನ್ನು ಕೇಳದವರು ಯಾರೂ ಇಲ್ಲ. ಕರ್ನಾಟಕ ರಾಜ್ಯದ ಅತ್ಯಂತ ಪ್ರಭಾವಿ ಶಾಸಕರಾಗಿದ್ದ ದಿವಂಗತ…

ByByshanmedianewsDec 22, 2025

ಉಮೀದ್ ಪೋರ್ಟಲ್ ಸಮಸ್ಯೆ: ವಕ್ಫ್ ಆಸ್ತಿ ಅಪ್ಲೋಡ್ ಗಡುವು ವಿಸ್ತರಣೆಗಾಗಿ AIMPLB ನಿಯೋಗದಿಂದ ಕೇಂದ್ರ ಸಚಿವರಿಗೆ ಮನವಿ

ಅಖಿಲ ಭಾರತ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌ನ (AIMPLB) ಉನ್ನತ ಮಟ್ಟದ ನಿಯೋಗವು ಕೇಂದ್ರ ಅಲ್ಪಸಂಖ್ಯಾತ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿಯಾಗಿ, ವಕ್ಫ್…

ByByshanmedianewsDec 12, 2025

Scroll to Top