ದೇಶದ ಅತ್ಯುನ್ನತ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ “ಸಿಲ್ವರ್ ಎಲಿಫೆಂಟ್” ಪ್ರಶಸ್ತಿಗೆ ಭಾಜನರಾದ ಕರ್ನಾಟಕ ಸಭಾಧ್ಯಕ್ಷ ಯು.ಟಿ.ಖಾದರ್.
ಬಾಲ್ಯದ ಶಾಲಾ ಜೀವನದಲ್ಲಿಯೇ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನಲ್ಲಿ ತೊಡಗಿಸಿಕೊಂಡಿರುವ ಕರ್ನಾಟಕ ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಅತ್ಯುನ್ನತ “ಸಿಲ್ವರ್ ಎಲಿಫೆಂಟ್” ಪ್ರಶಸ್ತಿಗೆ ಭಾಜನರಾಗಿದ್ದಾರೆ.ತಾನು ಈ ಮಟ್ಟಕ್ಕೆ ಬೆಳೆದು ನಿಲ್ಲಲು ತನ್ನ ಜೀವನದಲ್ಲಿ ಸೇವಾ ಮನೋಭಾವ,ಶಿಸ್ತು ಹಾಗೂ ತಾಳ್ಮೆ ಗಳಿಸಲು ಕಾರಣವಾಗಿದ್ದು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನಿಂದ ಎಂಬುದನ್ನು ಹಲವಾರು ಬಾರಿ ಯು.ಟಿ.ಖಾದರ್ ಹೇಳಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.ಇದೇ ತಿಂಗಳ 26 ರಂದು ಲಕ್ನೋದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ರವರ ದಿವ್ಯ ಹಸ್ತದಿಂದ ಸಭಾಧ್ಯಕ್ಷ ಯು.ಟಿ.ಖಾದರ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಈ ಸಂದರ್ಭದಲ್ಲಿ ಸಿಲ್ವರ್ ಎಲಿಫೆಂಟ್ ಪ್ರಶಸ್ತಿಗೆ ಆಯ್ಕೆಯಾದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮ ಹಾಗೂ ಮಲೇಶಿಯಾದ ಮೇಜರ್ ಜನರಲ್ ಡಾಟೋ ಟೋಹ್ ಚೂನ್ ಸಿಯಾಂಗ್ ರವರು ಕೂಡಾ ಪ್ರಶಸ್ತಿ ಸ್ವೀಕರಿಸಲಿದ್ದಾರೆ .














