ಡಾ! ಅಲ್ ಹಾಜ್ ಯು.ಟಿ ಇಫ್ತಿಕಾರ್ ಅಲಿ ಫರೀದ್.
ಈ ಹೆಸರನ್ನು ಕೇಳದವರು ಯಾರೂ ಇಲ್ಲ. ಕರ್ನಾಟಕ ರಾಜ್ಯದ ಅತ್ಯಂತ ಪ್ರಭಾವಿ ಶಾಸಕರಾಗಿದ್ದ ದಿವಂಗತ ಯು.ಟಿ ಫರೀದ್ ರವರ ಸುಪುತ್ರ ಹಾಗೂ ಪ್ರಸಕ್ತ ಕರ್ನಾಟಕ ವಿಧಾನಸಭೆಯ ಸಭಾಪತಿಗಳಾದ ಸನ್ಮಾನ್ಯ ಯು. ಟಿ ಕಾದರ್ ಅವರ ಸಹೋದರರೂ ಕರ್ನಾಟಕ ಸರಕಾರದ ಅಲೈಡ್ ಮತ್ತು ಹೆಲ್ತ್ ಕೌನ್ಸಿಲ್ ಇದರ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಇವರು ಸಮಾಜಕ್ಕೆ ಅರ್ಪಿಸಿದ ಸೇವೆಗಳ ಪಟ್ಟಿಗಳು ಅಪಾರ. *ವಿದ್ಯಾಕ್ಷೇತ್ರ*
ಯು. ಟಿ ಇಫ್ತಿಕಾರ್ ಅವರ ವಿದ್ಯಾಕ್ಷೇತ್ರದ ಬಗ್ಗೆ ಕಣ್ಣಾಡಿಸಿದರೆ ಸಮಾಜಕ್ಕೆ ಅದೆಷ್ಟೋ ವಿದ್ಯಾವಂತರನ್ನು ತಯಾರಿಗೊಳಿಸಿ ಅರ್ಪಿಸಿದ ಕೀರ್ತಿ ಇವರಿಗೆ ಸಲ್ಲಬೇಕು, ಬಡ ಕುಟುಂಬದಲ್ಲಿ ಜನಿಸಿದ ವಿದ್ಯಾರ್ಥಿಗಳು ಆರ್ಥಿಕ ಅಡಚಣೆಯಿಂದ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲು ಸಾಧ್ಯವಿಲ್ಲವೆಂಬ ನಿರಾಸೆಯಿಂದ ಇದ್ದವರಿಗೆ ಅವರ ಉನ್ನತ ಶಿಕ್ಷಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಇಂದು ಅದೆಷ್ಟೋ ಬಡ ಕುಟುಂಬದಲ್ಲಿ ಡಾಕ್ಟರ್, ಇಂಜಿನಿಯರ್, ಫಾರ್ಮಾಸಿಸ್ಟ್, ನರ್ಸ್, ಡೆಂಟಿಸ್ಟ್, ಫಿಸಿಯೋತೆರಪಿಸ್ಟ್, ಗಳು ತಲೆಯೆತ್ತಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವನಂತೆ ಮಾಡಿದ್ದಾರೆ, ಅಲ್ಲದೇ ತಂದೆ ತಾಯಿಗಲಿಲ್ಲದ ಯತೀಮ್ ಮಕ್ಕಳಿಗೆ ಯಾವುದೇ ಶುಲ್ಕವಿಲ್ಲದೆ ಸಂಪೂರ್ಣ ಉಚಿತವಾಗಿ ಉನ್ನತ ಶಿಕ್ಷಣವನ್ನು ಕೊಡಿಸಿದ ಅದೆಷ್ಟೋ ಉಧಾಹರಣೆ ನಮ್ಮ ಕಣ್ಣಮುಂದೆ ಇದೆ. *ವೈದ್ಯಕೀಯ*
ಇಂದು ಬಡ ಹಾಗೂ ಮಧ್ಯಮ ಕುಟುಂಬವು ಏನಾದರೂ ಕಾಯಿಲೆ ಬಂದರೆ ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ಭರಿಸಲು ಸಾಧ್ಯವಾಗದೇ ತಮ್ಮಲ್ಲಿರುವ ಒಡವೆಗಳನ್ನು ಮಾರಿ ಅದು ಸಾಲದೇ ಹೋದರೆ ತಮ್ಮ ಮನೆಯನ್ನು ಮಾರಿ ಬೀದಿಗೆ ಬಂದು ನಿಲ್ಲುವ ಪರಿಸ್ಥಿತಿ ಇದೆ, ಆದರೆ ಸನ್ಮಾನ್ಯ ಯು. ಟಿ ಇಫ್ತಿಕಾರ್ ಅವರು ಅದೆಷ್ಟೋ ಕುಟುಂಬಗಳ ಆಸ್ಪತ್ರೆಯ ಖರ್ಚುಗಳನ್ನು ಆಸ್ಪತ್ರೆಯ ಆಡಳಿತ ಮಂಡಳಿಯೊಂದಿಗೆ ಮಾತಾಡಿ ಬಡ ಕುಟುಂಬಗಳಿಗೆ ಸಹಾಯವನ್ನು ಮಾಡಿದ್ದಾರೆ, ಕೆಲವೊಮ್ಮೆ ತಮ್ಮದೇ ಆದ ಯು.ಟಿ ಫರೀದ್ ಫೌಂಡೇಶನ್ ಮುಖಾಂತರ ಭರಿಸಿ ರೋಗಿಗಳ ಪಾಲಿಗೆ ಹೊಸ ಭರವಸೆಯನ್ನು ಮೂಡಿಸಿದ್ದಾರೆ. *ವಿಕಲಾಂಗ ಮತ್ತು ಬುದ್ಧಿಮಾಂಧ್ಯರ ಸೇವೆ*
ಕೆಲವು ಬಡ ಕುಟುಂಬದಲ್ಲಿ ಜನಿಸಿದ ವಿಕಲಾಂಗ ಮತ್ತು ಬುದ್ಧಿ ಮಾಂದ್ಯ ಮಕ್ಕಳಿಗೆ ತಾವೇ ಆಸರೆಯಾಗಿ ಅವರ ಸೇವೆಗಳನ್ನು ಮಾಡುತ್ತಿರುವುದು ಯು.ಟಿ ಇಫ್ತಿಕಾರ್ ಅವರ ಸೇವಾ ಮನೋಭಾವಣೆಯ ವೈಸಿಸ್ಟ್ರ್ಯವಾಗಿದೆ.
ಯು. ಟಿ ಇಫ್ತಿಕಾರ್ ಅವರ ಸೇವೆಗಳ ಪಟ್ಟಿ ಮಾಡುತ್ತಾ ಹೋದರೆ ಮುಗಿಯದ ಕಥೆಯಾಗಿದೆ, ಸರಕಾರ ಯಾವುದೇ ಇರಲಿ ಹಳ್ಳಿಯಿಂದ ದಿಲ್ಲಿಯವರೆಗೂ ಎಲ್ಲಾ ಪಕ್ಷಗಳ ನಾಯಕರುಗಳ ನಿಕಟ ಒಡನಾಟದಿಂದ ಸಾರ್ವಜನಿಕರ ಅಹವಾಳಿಗೆ ಸ್ಪಂದನೆಯನ್ನು ನೀಡುವ ಆ ಉದಾತ್ತ ಮನೋಭಾವನೆಯಿಂದ ಯು.ಟಿ ಇಫ್ತಿಕಾರ್ ಅಲಿ ಎಂಬ ಹೆಸರು ದೇಶ ವಿದೇಶಗಳಲ್ಲಿಯೂ ರಾರಾಜಿಸುವಂತಾಗಿದೆ.
ಸೃಷ್ಟಿಕರ್ತನಾದ ಭಗವಂತನು ಬಡ ಹಾಗೂ ನೊಂದ ಕುಟುಂಬಗಳ ಸೇವೆಯನ್ನು ಇನ್ನಷ್ಟು ಮಾಡಲು ಯು. ಟಿ ಇಫ್ತಿಕಾರ್ ಅವರಿಗೆ ಆರೋಗ್ಯದಿಂದ ಕೂಡಿದ ದೀರ್ಘ ಆಯುಷ್ಯವನ್ನು ನೀಡಿ ಕರುಣಿಸಲಿ.
ALI AKBAR (ali monaka ullal)













