ಬಿ.ಎ.ಮೊಯ್ದಿನ್ ಬಾವಾ ಎಂಬ ಸಹೃದಯಿ ನಾಯಕ ಈಗ ಇಡೀ ರಾಜ್ಯಾದ್ಯಂತ ತಮ್ಮದೇ ಆದ ಅಭಿಮಾನಿ ವರ್ಗವನ್ನು ಹೊಂದಿದ್ದಾರೆ. ಇದಕ್ಕೆ ಕಾರಣ ಅವರ ಸಹೃದಯಿ ಮನಸ್ಸು ಮತ್ತು ನಿರಂತರ ಸಮಾಜ ಸೇವೆ. ರಾಜಕೀಯದಲ್ಲಿ ನಾಯಕನೊಬ್ಬ ಸೋತರೆ ಆ ನಾಯಕ ಕಾಣ ಸಿಗುವುದು ಬಹಳ ವಿರಳ ಆದರೆ ಬಿ.ಎ. ಮೊೈದಿನ್ ಬಾವಾ ಹಾಗಲ್ಲ ಸದಾ ಸಮಾಜ ಸೇಮಾ ಮನೋಭಾವ ಜನರೊಂದಿಗೆ ಯಾವುದೇ ಜಾತಿ, ಮತ ಭೇದವಿಲ್ಲದ ಪ್ರೀತಿಸುವ ವಿಶಾಲ ಹೃದಯ, ರಾಜಕೀಯ ಜೀವನದಲ್ಲಿ ಬೇರೆಯವರ ಕಾಲನ್ನೆಳೆದು ರಾಜಕೀಯವಾಗಿ ಮೇಲೆ ಬರುವುದು ಸಾಂಪ್ರದಾಯಿಕತೆ ಆದರೆ ಬಿ.ಎ. ಮೊೈದಿನ್ ಬಾವಾ ಮಾತ್ರ ಹಾಗಲ್ಲ ನೇರ ವಿರುದ್ಧ, ರಾಜಕೀಯದಲ್ಲಿ ಯಾರನ್ನು ಕೂಡಾ ದ್ವೇಷಿಸುವುದಿಲ್ಲ ತನ್ನನ್ನು ದ್ವೇಷಿಸುವವರನ್ನು ಕೂಡಾ ಪ್ರೀತಿಸುವ ವಿಶಾಲ ಹೃದಯ..
ಕಳೆದ ಬಾರಿಯ ವಿಧಾನ ಸಭೆ ಮಂಗಳೂರು ಉತ್ತರ ಕ್ಷೇತ್ರದಿಂದ ಟಿಕೆಟ್ ಸಿಗದಂತೆ ಮಾಡಿದ ಕಾಂಗ್ರೆಸ್ ಪಕ್ಷದ ಸ್ವಯಂಘೋಷಿತ ಮುಸ್ಲಿಮ್ ನಾಯಕರೊಂದಿಗೆ ಕೂಡಾ ಹಲವಾರು ಬಾರಿ ವೇದಿಕೆ ಹಂಚಿಕೊಂಡಿದ್ದಾರೆ. ಅದಕ್ಕೆ ಕಾರಣ ಅವರ ನಿಷ್ಕಳಂಕ ಹೃದಯ.. ರಾಜಕೀಯ ಎಂದರೆ ಹಾಗೇನೇ ಇಂದು ರಾಜನಾದವನು ನಾಳೆ ಗುಲಾಮನಾಗಲೇ ಬೇಕು.. ಈಗ ಅಧಿಕಾರವಿದ್ದು ಅಧಿಕಾರ ದರ್ಪದಿಂದ ಬೀಗುವ ನಮ್ಮ ಜಿಲ್ಲೆಯ ಮುಸ್ಲಿಮ್ ನಾಯಕರುಗಳಿಗೆ ಮಾಜಿ ಶಾಸಕ ಬಿ.ಎ. ಮೊೈದಿನ್ ಬಾವಾ ಮಾದರಿಯಾಗಲಿ ಮತ್ತು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಅವರು ವಿಧಾನ ಸಭೆ ಪ್ರವೇಶಿಸಲಿ. ಮಾಜಿ ಶಾಸಕರ ಕಾಂಗ್ರೆಸ್ ಮರು ಸೇರ್ಪಡೆಗೊ ಕೂಡಾ ಜಿಲ್ಲೆಯ ಸ್ವಯಂಘೋಷಿತ ಮುಸ್ಲಿಮ್ ನಾಯಕರು ತಡೆಯಾಗುತ್ತಿರುವುದು ಮಾತ್ರ ಖೇದಕರ…













