ವಿಧಾನಸಭೆಯ ಸಭಾಂಗಣದೊಳಗೆ ಮುಸ್ಲಿಂ ವಿದ್ವಾಂಸರೂ, ಸಮಾಜದ ಎಲ್ಲಾ ವರ್ಗಗಳಿಂದ ಗೌರವಿಸಲ್ಪಡುವ ಧರ್ಮಗುರುಗಳೂ ಆದ ತಂಙಳ್ ರವರನ್ನು ವಿಧಾನಸೌಧಕ್ಕೆ ಕರೆದುಕೊಂಡು ಹೋಗಿದ್ದು ವಿವಾದವಾಗಿದೆ. ವಿಧಾನಸೌಧದ ಸಭಾಂಗಣದೊಳಗೆ ನಿಯಮಬದ್ಧವಾಗಿ ಪ್ರಜಾಪ್ರಭುತ್ವದ ಸೌಂದರ್ಯವನ್ನು ಸವಿಯುವುದು ಅಪರಾಧ ಹೇಗಾಗುತ್ತದೆ? ವಿಧಾನಸೌಧ ಎನ್ನುವುದು ಪಾರಂಪರಿಕ ಕಟ್ಟಡ. ಇದು ಜನಸಾಮಾನ್ಯರ ಪ್ರವಾಸಿ ತಾಣವೂ ಹೌದು. ವಿಧಾನಸೌಧ ವೀಕ್ಷಣೆಗೆಂದೇ ಸಾರ್ವಜನಿಕರಿಗೆ ಸರ್ಕಾರ/ಸ್ಪೀಕರ್ ಕಚೇರಿ ಪ್ರತ್ಯೇಕ ವ್ಯವಸ್ಥೆಯನ್ನೇ ಮಾಡಿದೆ.
ಲಗತ್ತಿಸಲಾದ ಚಿತ್ರದಲ್ಲಿರುವ ಅಂಶಗಳು ಇಲ್ಲಿವೆ:
‘ತಂಙಳ್‌ ವಿಧಾನಸಭೆ ಸಭಾಂಗಣ ವೀಕ್ಷಣೆಯನ್ನು ಪ್ರಜಾಪ್ರಭುತ್ವ ವಿರೋಧಿಗಳು ಮಾತ್ರ ವಿರೋಧಿಸುತ್ತಾರೆ’
As Per The Established Procedures, When The Karnataka Legislative Assembly Is Not In Session, The Premises Remain Open For Guided visits, As Permitted By The Speaker Office. Photography During Such Non-Session Periods Falls Well Within Permissible Guidelines And Is Subject To The Same Terms Applied To All Visitors. There’s No Breach Of Protocol
(ಸ್ಥಾಪಿತ ಕಾರ್ಯವಿಧಾನಗಳ ಪ್ರಕಾರ, ಕರ್ನಾಟಕ ವಿಧಾನಸಭೆಯು ಅಧಿವೇಶನದಲ್ಲಿ ಇಲ್ಲದಿದ್ದಾಗ, ಸ್ಪೀಕರ್ ಕಚೇರಿಯ ಅನುಮತಿಯ ಮೇರೆಗೆ ಮಾರ್ಗದರ್ಶಿ ವೀಕ್ಷಣೆಗಾಗಿ ಆವರಣವು ತೆರೆದಿರುತ್ತದೆ. ಅಂತಹ ಅಧಿವೇಶನ ರಹಿತ ಅವಧಿಗಳಲ್ಲಿ ಛಾಯಾಗ್ರಹಣವು ಅನುಮತಿಸಲಾದ ಮಾರ್ಗಸೂಚಿಗಳ ವ್ಯಾಪ್ತಿಯಲ್ಲಿ ಬರುತ್ತದೆ ಮತ್ತು ಎಲ್ಲಾ ಸಂದರ್ಶಕರಿಗೆ ಅನ್ವಯವಾಗುವ ಅದೇ ನಿಯಮಗಳಿಗೆ ಒಳಪಟ್ಟಿರುತ್ತದೆ. ಇಲ್ಲಿ ಯಾವುದೇ ಶಿಷ್ಟಾಚಾರದ ಉಲ್ಲಂಘನೆಯಾಗಿಲ್ಲ)

error: Content is protected !!
Don`t copy text! This Content is Protected