Image

ಎಸ್.ಡಿ.ಟಿ.ಯು ಮಂಗಳೂರು ಗ್ರಾಮಾಂತರ ನೂತನ ಜಿಲ್ಲಾಧ್ಯಕ್ಷರಾಗಿ ಸೆಲೀಮ್ ಜಿಕೆ ಗುರುವಾಯನಕೆರೆ, ಪ್ರಧಾನ ಕಾರ್ಯದರ್ಶಿಯಾಗಿ ಸೆಲೀಮ್ ಆಲಾಡಿ

ಮಂಗಳೂರು ಅ.31 : bx ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ಮಂಗಳೂರು ಗ್ರಾಮಾಂತರ ನೂತನ ಜಿಲ್ಲಾ ಸಮಿತಿಯ ಪದಗ್ರಹಣ SDTU ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಹಮೀದ್ ಸಾಲ್ಮರ ರವರ ಅಧ್ಯಕ್ಷತೆಯಲ್ಲಿ ಪುತ್ತೂರಿನ ಮನಿಷಾ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಕಾರ್ಮಿಕ ಹೋರಾಟದ ಇತಿಹಾಸ ಮತ್ತು ಆ ಹೋರಾಟದ ಫಲವಾಗಿ ಕಾರ್ಮಿಕರ ಶ್ರೇಯೋಭಿವ್ರದ್ದಿಗಾಗಿ ಚಾಲ್ತಿಯಲ್ಲಿದ್ದ ಕಾನೂನನ್ನು ಉದಾರೀಕರಣ, ಖಾಸಾಗಿಕರಣ, ಜಾಗತಿಕರಣದ ಹೆಸರಿನಲ್ಲಿ ಗಾಳಿಗೆ ತೂರಿ ಕಾರ್ಮಿಕರನ್ನು ಸರಕಾರ ಶೋಷಣೆಗೆಯ್ಯುತ್ತಿದೆ ಈ ನಿಟ್ಟಿನಲ್ಲಿ SDTU ಕಾರ್ಮಿಕರನ್ನು ಸಂಘಟಿಸಿ ಅವರಲ್ಲಿ ಪ್ರಜ್ಞಾವಂತಿಕೆ ಮೂಡಿಸಿ ಹಕ್ಕು ಮತ್ತು ಅವಕಾಶಗಳಿಗಾಗಿ ನಿರಂತರ ಹೋರಾಟ ನಡೆಸುತ್ತಿದೆ ಎಂದರು
SDTU ರಾಜ್ಯ ಸಹ ಸಂಚಾಲಕ ಖಾದರ್ ಫರಂಗಿಪೇಟೆ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯನ್ನು ಘೋಷಣೆ ಮಾಡಿದರು

2025-28 ರ ಅವಧಿಗೆ ನೂತನ ಜಿಲ್ಲಾಧ್ಯಕ್ಷರಾಗಿ ಸೆಲೀಮ್ ಜಿಕೆ ಗುರುವಾಯನಕೆರೆ, ಉಪಾಧ್ಯಕ್ಷರಾಗಿ ಫಿಲಿಫ್ ಹೆನ್ರಿ ಡಿಸೋಜ, ಪ್ರಧಾನ ಕಾರ್ಯದರ್ಶಿಯಾಗಿ ಸಲೀಮ್ ಆಲಾಡಿ, ಕಾರ್ಯದರ್ಶಿಯಾಗಿ ಫಝಲ್ ಉಜಿರೆ ಕೋಶಾಧಿಕಾರಿ ಹನೀಫ್ ನೆಲ್ಯಾಡಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶ್ರಫ್ ಕಲ್ಲೇರಿ ಇಸಾಕ್ ತಲಪಾಡಿ, ಹಮೀದ್ ಕೂರ್ನಡ್ಕ, ಮುಬಾರಕ್ ಪೊನ್ನೋಡಿ, ಅಝೀಜ್ ಉಪ್ಪಿನಂಗಡಿ ಯವರುy ಆಯ್ಕೆಯಾದರು

ಮುಖ್ಯ ಅತಿಥಿಗಳಾಗಿ ಮಂಗಳೂರು ನಗರ ಜಿಲ್ಲಾಧ್ಯಕ್ಷ ರಹಿಮಾನ್ ಬೋಳಿಯಾರ್, ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಬೆಂಗರೆ, ಕರ್ನಾಟಕ ರಾಜ್ಯ ರೈತ ಸಂಘ ಬಂಟ್ವಾಳ ತಾಲೂಕು ಕಾರ್ಯದರ್ಶಿ ಎನ್. ಕೆ ಇದ್ದಿನಬ್ಬ, ಸ್ನೇಹ ಸಂಗಮ ಆಟೋ ಚಾಲಕರ ಮಾಲಕರy ಸಂಘ ಪುತ್ತೂರು ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ತೆಂಕಿಲ, ಭಾರತ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಅಶ್ರಫ್ ಬನ್ನೂರ್, ನೇತ್ರಾವತಿ ಆಟೋ ಚಾಲಕ ಮಾಲಕರ ಸಂಘದ ಉಪ್ಪಿನಂಗಡಿ ಅಧ್ಯಕ್ಷ ಫಾರೂಕು ಝಿಂದಗಿ, ಸೋಶಿಯಲ್ ಡೆಮಾಕ್ರಟಿಕ್ ಆಟೋ ಚಾಲಕರ ಯೂನಿಯನ್ ಪುತ್ತೂರು ಏರಿಯಾ ಅಧ್ಯಕ್ಷ ಅಸಿಫ್ ಮುಕ್ವೆ ಉಪಸ್ಥಿತರಿದ್ದರು
ಸಿದ್ದೀಕ್ ಬೀಟಿಗೆ ನಿರೂಪಿಸಿ ಸೆಲೀಮ್ ಆಲಾಡಿ ಧನ್ಯವಾದಗೈದರು

Releated Posts

ಸಹೃದಯಿ ಸಮಾಜಸೇವಕ ಬಿ.ಎ. ಮೊಯ್ದಿನ್ ಬಾವಾ ವಿಧಾನಸಭೆ ಪ್ರವೇಶಿಸಬೇಕೆಂಬ ಜನಮನದ ಆಶಯ

ಬಿ.ಎ.ಮೊಯ್ದಿನ್ ಬಾವಾ ಎಂಬ ಸಹೃದಯಿ ನಾಯಕ ಈಗ ಇಡೀ ರಾಜ್ಯಾದ್ಯಂತ ತಮ್ಮದೇ ಆದ ಅಭಿಮಾನಿ ವರ್ಗವನ್ನು ಹೊಂದಿದ್ದಾರೆ. ಇದಕ್ಕೆ ಕಾರಣ ಅವರ ಸಹೃದಯಿ ಮನಸ್ಸು…

ByByshanmedianewsDec 23, 2025

ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ : ಘಟಾನುಘಟಿ ನಾಯಕರುಗಳ ಭವಿಷ್ಯ ಡಿಸೇಂಬರ್ 24 ಕ್ಕೆ ನಿರ್ಧಾರ

ಬಜ್ಪೆ ಪಟ್ಟಣ ಪಂಚಾಯತ್ ಚುನಾವಣೆ : ಘಟಾನುಘಟಿ ನಾಯಕರುಗಳ ಭವಿಷ್ಯ ಡಿಸೇಂಬರ್ 24 ಕ್ಕೆ ನಿರ್ಧಾರ ಇತ್ತೀಚೆಗೆ ಮೇಲ್ದರ್ಜೆ ಗೆರಲ್ಪಟ್ಟ ಬಜ್ಪೆ ಪಟ್ಟಣ ಪಂಚಾಯತ್,…

ByByshanmedianewsDec 22, 2025

ಸಮಾಜಸೇವೆಯ ಸಾರ್ಥಕ ಪ್ರತೀಕ ಡಾ. ಅಲ್ ಹಾಜ್ ಯು.ಟಿ ಇಫ್ತಿಕಾರ್ ಅಲಿ ಫರೀದ್ – ಶಿಕ್ಷಣ, ವೈದ್ಯಕೀಯ ಹಾಗೂ ಮಾನವೀಯ ಸೇವೆಯಲ್ಲಿ ಅಪೂರ್ವ ಕೊಡುಗೆ

ಡಾ! ಅಲ್ ಹಾಜ್ ಯು.ಟಿ ಇಫ್ತಿಕಾರ್ ಅಲಿ ಫರೀದ್. ಈ ಹೆಸರನ್ನು ಕೇಳದವರು ಯಾರೂ ಇಲ್ಲ. ಕರ್ನಾಟಕ ರಾಜ್ಯದ ಅತ್ಯಂತ ಪ್ರಭಾವಿ ಶಾಸಕರಾಗಿದ್ದ ದಿವಂಗತ…

ByByshanmedianewsDec 22, 2025

ಉಮೀದ್ ಪೋರ್ಟಲ್ ಸಮಸ್ಯೆ: ವಕ್ಫ್ ಆಸ್ತಿ ಅಪ್ಲೋಡ್ ಗಡುವು ವಿಸ್ತರಣೆಗಾಗಿ AIMPLB ನಿಯೋಗದಿಂದ ಕೇಂದ್ರ ಸಚಿವರಿಗೆ ಮನವಿ

ಅಖಿಲ ಭಾರತ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌ನ (AIMPLB) ಉನ್ನತ ಮಟ್ಟದ ನಿಯೋಗವು ಕೇಂದ್ರ ಅಲ್ಪಸಂಖ್ಯಾತ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿಯಾಗಿ, ವಕ್ಫ್…

ByByshanmedianewsDec 12, 2025

Scroll to Top