ಭಾರೀ ಕುತೂಹಲ ಮೂಡಿಸಿದ್ದ ಮೇಲ0ಗಡಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತದ ಮಹತ್ತರವಾದ ಜವಾಬ್ದಾರಿ ವಹಿಸಿ ಕೊಂಡಿರುವ ಮೇಲ0ಗಡಿ ಉರ್ದು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಸಭೆ ಇಂದು ದಿನಾಂಕ 7 ಶುಕ್ರವಾರ ಮಗ್ರಿಬ್ ನಮಾಜ್ ನಂತರ ಉರ್ದು ಶಾಲೆಯ ಒಳ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ U. M ಶರ್ಪುದ್ದೀನ್ ರನ್ನು ಆಯ್ಕೆ ಮಾಡಲಾಯಿತು.
ಈ ಮೊದಲು 34 ಸಮಿತಿ ಸದಸ್ಯರು ಸಭೆ ಸೇರಿ ಕೊಂಡು ಮತದಾನದ ಮೂಲಕ 11 ಆಡಳಿತ ಸಮಿತಿಯನ್ನು ಆಯ್ಕೆ ಮಾಡಿದ್ದರು
ಇದೀಗ ಈ 11 ಆಡಳಿತ ಸಮಿತಿಯವರು ಸೇರಿ ಕೊಂಡು ಹಳೆ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಿದ್ದಾರೆ.
_U. M. ಶರ್ಪುದ್ದೀನ್ (ಅಧ್ಯಕ್ಷ)
ಸಾದಿಕ್ ಮೇಲ0ಗಡಿ ( ಪ್ರಧಾನ ಕಾರ್ಯದರ್ಶಿ)
ಪುತ್ತುಬಾವ ಗುಂಡಿ ಹಿತ್ಲು ( ಜತೆ ಕಾರ್ಯದರ್ಶಿ)
ಅಶ್ರಫ್ ಸುಂದರಿ ಬಾಗ್ ( ಒಂದನೇ ಉಪಾಧ್ಯಕ್ಷ )
ಸವಾದ್ ಅಬ್ದುಲ್ಲಾ (ಎರಡನೇ ಉಪಾಧ್ಯಕ್ಷ)
ಅಶ್ರಫ್ ಟೈಲರ್ ( ಖಜಾಂಚಿ)
ತೌಸೀಫ್ ಮೇಲ0ಗಡಿ (ಲೆಕ್ಕ ಪರಿಶೋಧಕ)
ಬಾಕಿ ನಾಲ್ಕು ಸದಸ್ಯರು ಆಡಳಿತ ಸಮಿತಿಯಲ್ಲಿ ಸದಸ್ಯರಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ.














