ಬೋಳಿಯಾರ್ ನ10: ಬೋಳಿಯಾರ್ ಗೋಳಿದಡಿ ಕ್ರಾಸ್ ರಾಜ್ಯ ಹೆದ್ದಾರಿಯಲ್ಲಿ ನಿನ್ನೆ ದ್ವಿಚಕ್ರ ವಾಹನ ಸವಾರರು ಪರಸ್ಪರ ಡಿಕ್ಕಿಹೊಡೆದ ಕಾರಣ ಸ್ಥಳಿಯ ನಿವಾಸಿ ಫಾರೂಕ್ ಎಂಬುವವರು ತೀವ್ರ ಗಾಯಾಳಾಗಿ ಖಾಸಗಿ ಅಸ್ಪತ್ರೆ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೋಳಿಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋಳಿದಡಿ ಕ್ರಾಸ್ ನೇತಾಜಿ ಆಟೋ ಪಾರ್ಕ್ ಹತ್ತಿರ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿದ್ದು ಈ ರಸ್ತೆಯಲ್ಲಿ ದಿನಾಲು ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಈ ರಸ್ತೆಯ ಪಕ್ಕದಲ್ಲಿಯೇ ಬಸ್ಸು ತಂಗುದಾನ ಆಟೋ ಪಾರ್ಕ್ ಹಾಗೂ ಪಾದಚಾರಿಗಳು ನಡೆದಾಡುವ ರಸ್ತೆ ಹಾಗೂ ಶಾಲಾ ವಿದ್ಯಾರ್ಥಿಗಳು ಮದರಸದ ವಿದ್ಯಾರ್ಥಿಗಳು ಮನೆಗೆ ಹೋಗಬೇಕಾದರೆ ಮಜಿ ದೇವಸ್ಥಾನಕ್ಕೆ ಹೋಗಬೇಕಾದರೆ ಈ ರಸ್ತೆ ದಾಟಿಯೇ ಹೋಗಬೇಕು ಈ ಎಲ್ಲಾ ಕಾರಣಗಳಿಂದ ಇಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಅಪಘಾತಗಳು ಸಂಭವಿಸುತ್ತಲೇ ಇದೆ ಈಗಾಗಲೇ ದೊಡ್ಡಮಟ್ಟದ ಅಪಘಾತ ಸಂಭವಿಸಿ ಬಾಲಕೃಷ್ಣ ದೆದ್ದು, ವಿಲಿಯಂ ಡಿಸೋಜ ಮಜಿ ಸೈಟ್ ಹಾಗೂ ರೋಶನ್ ವರ್ಕಾಡಿ ಮೂರು ಅಮೂಲ್ಯ ಜೀವಗಳು ಬಲಿಯಾಗಿ ಕುಟುಂಬ ಅನಾಥವಾಗಿದೆ ಹಾಗೆಯೇ ದ್ವಿಚಕ್ರ ವಾಹನ ಸವಾರರ ಹಾಗೂ ಪಾದಚಾರಿಗಳು ಕಾಲು ಕಳೆದುಕೊಂಡ ಅದೆಷ್ಟೋ ಘಟನೆಗಳು ಕೂಡ ಸಂಭವಿಸಿದೆ
ಆದುದರಿಂದ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಸಂಭವಿಸದಂತೆ ಕೂಡಲೇ ರಸ್ತೆಗೆ ಹಂಪ್ಸ್ ಅಳವಡಿಸಬೇಕು ಈ ಸಮಸ್ಯೆ ಬಗೆಯರಿದಿದ್ದಲ್ಲಿ ಎಲ್ಲಾ ಗ್ರಾಮಸ್ಥರನ್ನು ಸೇರಿಸಿ ಜನಾಗ್ರಹ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಸ್ಥಳಿಯ ನಿವಾಸಿಗಳ ಸಹಿ ಸಂಗ್ರಹ ಮಾಡಿ ಬೋಳಿಯಾರ್ ಗ್ರಾಮ ಪಂಚಾಯತ್ ಪಿ.ಡಿ.ಓ ಅಧಿಕಾರಿಯಲ್ಲಿ ಮನವಿ ಮಾಡಲಾಯಿತು ಇದಕ್ಕೆ ಸ್ಪಂದಿಸಿದ ಮಾನ್ಯ ಅಧಿಕಾರಿ ಕೂಡಲೇ ಮಾಡಿಸಿ ಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರರಾದ ರಹಿಮಾನ್ ಬೋಳಿಯಾರ್, ಬಿಂದಾಝ್ ಪ್ರೆಂಡ್ಸ್ ಅಧ್ಯಕ್ಷರಾದ ಬದ್ರುದ್ದೀನ್ ,ನೇತಾಜಿ ಆಟೋ ಪಾರ್ಕ್ ಅಧ್ಯಕ್ಷರಾದ ಝೈನುದ್ದೀನ್, ರಂತಡ್ಕ ಸ್ಥಳಿಯ ನಿವಾಸಿ ರಾಜ್ ಕುಮಾರ್ ಹಾಗೂ ವೆಲಂಕಣಿ ಕಟ್ಟಡ ಮಾಲಕರಾದ ಲೋರೆನ್ಸ್ ಡಿ.ಸೋಜಾ,ಸವಾದ್ ರಂತಡ್ಕ ಉಪಸ್ಥಿತರಿದ್ದರು.














